Wednesday, August 17, 2022

Latest Posts

ಸೀರಂ ಇನ್‌ಸ್ಟಿಟ್ಯೂಟ್ ಯಿಂದ ಸೆಪ್ಟೆಂಬರ್‌ ನಲ್ಲಿ ಸ್ಪುಟ್ನಿಕ್ V ಕೊರೋನಾ ಲಸಿಕೆ ಉತ್ಪಾದನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸೀರಂ ಇನ್‌ಸ್ಟಿಟ್ಯೂಟ್ ಸ್ಪುಟ್ನಿಕ್ V ಕೊರೋನಾ ಲಸಿಕೆಯನ್ನು ಸೆಪ್ಟೆಂಬರ್‌ನಿಂದ ಉತ್ಪಾದಿಸಲಿದೆ ಎಂದು ರಷ್ಯಾದ ಮೇಕರ್ ಮಾಹಿತಿ ನೀಡಿದೆ.
ಪುಣೆಯಲ್ಲಿ ಲಸಿಕೆ ಉತ್ಪಾದನೆ ಶುರುವಾಗಲಿದ್ದು, ರಷ್ಯಾದ ಆರ್‌ಡಿಐಎಫ್‌ ನೀಡಿರುವ ಮಾಹಿತಿ ಪ್ರಕಾರ, ಪ್ರತಿ ವರ್ಷ ಭಾರತದಲ್ಲಿ 300 ಮಿಲಿಯನ್ ಲಸಿಕೆ ಉತ್ಪಾದಿಸಲಿದೆ ಎಂದಿದೆ.
ತಂತ್ರಜ್ಞಾನ ರವಾನೆ ಈಗಾಗಲೇ ಆರಂಭವಾಗಿದ್ದು, ಸೆಪ್ಟೆಂಬರ್‌ನಲ್ಲಿ ಉತ್ಪಾದನೆ ಶುರುವಾಗಲಿದೆ, ಸೀರಂ ಈಗಾಗಲೇ ಸೆಲ್ ಹಾಗೂ ವೆಕ್ಟರ್ ಮಾದರಿಗಳನ್ನು ಗಮಾಲಿಯಾ ಕೇಂದ್ರದಿಂದ ಪಡೆದುಕೊಂಡಿದೆ.
ಈ ಕುರಿತು ಮಾತನಾಡಿದ ಆದರ್ ಪೂನಾವಾಲ, ಆರ್‌ಡಿಐಎಫ್ ಪಾಲುದಾರರಾಗಿರುವುದಕ್ಕೆ ಸಂತೋಷವಾಗಿದೆ, ಸ್ಪುಟ್ನಿಕ್ ಲಸಿಕೆಯು ಭಾರತ ಸೇರಿದಂತೆ ಇಡೀ ವಿಶ್ವಾದ್ಯಂತ ಪ್ರಚಲಿತದಲ್ಲಿರುವ ಲಸಿಕೆಯಾಗಿದೆ.ಇದು ವೈರಸ್ ವಿರುದ್ಧ ಹೋರಾಟ ನಡೆಸುತ್ತದೆ, ಆಗಸ್ಟ್‌ನಲ್ಲಿ 16 ರಿಂದ 18 ಕೋಟಿಯಷ್ಟು ಲಸಿಕೆಯನ್ನು ಉತ್ಪಾದಿಸಲಾಗುತ್ತದೆ, ಸೆಪ್ಟೆಂಬರ್‌ನಲ್ಲಿ ಸುಮಾರು 30 ಕೋಟಿ ಲಸಿಕೆ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!