ಮದುವೆ ಭರವಸೆ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಬಳಿಕ ಮದುವೆ ಆಗಲ್ಲ ಎಂದರೆ ಅದು ಅತ್ಯಾಚಾರ ಅಲ್ಲ: ಹೈಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಯಾಗುವ ಭರವಸೆ ನೀಡಿ, ಪರಸ್ಪರ ಸಮ್ಮತಿಯ ಮೇರೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ಮದುವೆಯಾಗದಿದ್ದರೆ ಅದು ಅತ್ಯಾಚಾರ ಎಂದು ಪರಿಗಣನೆ ಆಗುವುದಿಲ್ಲ ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ.

ಕೇರಳದ ಪುನಲೂರ್‌ ವ್ಯಕ್ತಿಯೊಬ್ಬರ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣ ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ಮಾತನ್ನು ಹೇಳಿದೆ.

ಪುನಲೂರ್‌ ಮಹಿಳೆಯನ್ನು ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ಭರವಸೆಯನ್ನೂ ನೀಡಿದ್ದರು. ಆದರೆ, ಸಮ್ಮತಿಯಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ಅವರು ಮದುವೆಯಾಗಲು ನಿರಾಕರಿಸಿದ್ದರು. ಇದರಿಂದ ನೊಂದ ಮಹಿಳೆಯು ಅತ್ಯಾಚಾರದ ಆರೋಪ ಮಾಡಿದ್ದರು.

ಆದರೆ, ಅತ್ಯಾಚಾರ ಪ್ರಕರಣವನ್ನು ಹೈಕೋರ್ಟ್‌ ರದ್ದುಗೊಳಿಸಿದ್ದು, ಮಹಿಳೆಯು ಪುರುಷನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಾಗ ಸಮ್ಮತಿ ಇತ್ತು ಎಂಬುದು ಸಾಬೀತಾಗಿದೆ. ಅಲ್ಲದೆ, ಮಹಿಳೆಯು ಮೊದಲ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದು, ಪ್ರಕ್ರಿಯೆ ಮುಗಿಸಲು ಕಾಯುತ್ತಿದ್ದರು. ಹೀಗಿರುವಾಗ ಅತ್ಯಾಚಾರ ಪ್ರಕರಣ ಅನ್ವಯವಾಗುವುದಿಲ್ಲ. ಹಾಗೆಯೇ, ವಂಚನೆ ಕೇಸ್‌ ಕೂಡ ಮಾನ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!