ಪ್ರೊಟೀನ್‌ಯುಕ್ತ ಲಡ್ಡು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ಲಡ್ಡು, ಲಾಡು ಅಂದರೆ ಎಲ್ಲರಿಗೂ ಎಣ್ಣೆಯಲ್ಲಿ ಕರೆಯುವ ಪದಾರ್ಥ ನೆನಪಿಗೆ ಬರುತ್ತದೆ ಆದರೆ ಇದು ಹಾಗಲ್ಲ ಕೇವಲ ಎರಡೇ ಪದಾರ್ಥಗಳನ್ನು ಬಳಸಿಕೊಂಡು, ಆರೋಗ್ಯಕ್ಕೆ ಉಪಯೋಗವಾಗುವ ಲಡ್ಡು ಇದು. ಮಕ್ಕಳು ಮಾತ್ರ ಬಾಯಿ ಚಪ್ಪರಿಸಿ ತಿಂತಾರೆ. ಇದರಿಂದ ದೇಹಕ್ಕೆ ಕಬ್ಬಿಣಾಂಸ ಹೆಚ್ಚಾಗಿ ಸಿಗುತ್ತದೆ. ಕಡಲೆಬೇಜ(ಶೇಂಗಾ) ಬೀಜ ಹಾಗೂ ಬೆಲ್ಲ ಈ ಎರಡೇ ಸಾಮಗ್ರಿಯಿMD ಈ ಪದಾರ್ಥ ತಯಾರು ಮಾಡಬಹುದು..

ಬೇಕಾಗುವ ಸಾಮಗ್ರಿ

ಕಡಲೆ ಬೀಜ-ಒಂದು ಕಪ್‌, ಬೆಲ್ಲ-ಅರ್ಧ ಕಪ್‌

ಮಾಡುವ ವಿಧಾನ: 

ಮೊದಲಿಗೆ ಒಲೆ ಮೇಲೆ ತವಾ ಇಟ್ಟು ಅದಕ್ಕೆ ಕಡಲೆಬೀಜ ಹಾಕಿ ಕಂದು ಬಣ್ಣ ಬರುವವರೆಗೂ ಕೈಯಾಡಿಸಿ ಹುರದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸೀಸಬಾರದು. ಹುರಿದ ಮೇಲೆ ಅದರ ಸಿಪ್ಪೆ ತೆಗೆದು ಒಂದು ಮಿಕ್ಸಿ ಜಾರಿಗೆ ಹಾಕಿ ಅರ್ಧಂಬರ್ಧ ಪುಡಿ ಮಾಡಿಕೊಳ್ಳಿ. ಬಳಿಕ ಅದರೊಳಗೆ ಅರ್ಧ ಕಪ್‌ ಬೆಲ್ಲ ಹಾಕಿ ಮತ್ತೆ ನುಣ್ಣಗೆ ಮಿಕ್ಸಿ ಮಾಡಿಕೊಳ್ಳಬೇಕು. ಆಗಾಗ ತಿರುವುತ್ತಾ ಮಿಕ್ಸಿಯಲ್ಲಿ ಉಂಡೆ ಆಡುವಷ್ಟು ತೇವಾಂಶ ಬಿಡುವವರೆಗೂ ರುಬ್ಬಬೇಕು. ಮಿಶ್ರಣವು ಮೆತ್ತಗಾಗಿ ಉಂಡೆ ಮಾಡಲು ಬಂದಾಗ ಅದನ್ನು ಒಂದು ಪಾತ್ರೆಗೆ ಹಾಕಿ ಮೆತ್ತಗೆ ನಾದಿ ಉಂಡೆ ಕಟ್ಟಿದ್ರೆ ಪ್ರೊಟೀನ್‌ ಲಡ್ಡು ರೆಡಿ. ಮಕ್ಕಳಿಗೆ ತಿನ್ನಲೂ ರುಚಿ, ಮಾಡಲೂ ಸುಲಭ, ಆರೋಗ್ಯಕ್ಕೂ ಉಪಾಯಕಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!