spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೇಂದ್ರ ಸರ್ಕಾರದ ಹಿಂದಿ ನೀತಿಯನ್ನು ವಿರೋಧಿಸಿ ಕರವೇ ಪ್ರತಿಭಟನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಹುಬ್ಬಳ್ಳಿ:

ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದಿ ಭಾಷೆಯನ್ನು ಸಿಂಹಾಸನದ ಮೇಲೆ ಕೂರಿಸಿ, ಕನ್ನಡ ಭಾಷೆಗೆ ಅವಮಾನ ಮಾಡಿದೆ. ಈ ಮೂಲಕ ಕನ್ನಡ ಭಾಷೆಯನ್ನು ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದಂತಾಗಿದೆ. ಭಾರತದಲ್ಲಿ ಹಿಂದಿ ಎನ್ನುವ ಸುಳ್ಳಿನ ಸೌಧವನ್ನು ರೂಪಿಸಲು ಅಡಿಪಾಯ ಹಾಕಿದ ದಿನವಾಗಿದೆ. ಈ ಕರಾಳ ದಿನವನ್ನು ಒಕ್ಕೂಟ ಸರಕಾರ ಹಿಂದಿ ದಿವಸ್ ಎಂದು ಆಚರಿಸುವುದು ನಿಲ್ಲಿಸಬೇಕು. ರಾಜ್ಯದಲ್ಲಿ ಮೊದಲಿಗೆ ಕನ್ನಡಕ್ಕೆ ಆದ್ಯತೆ ಕೊಡಬೇಕೆಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಒತ್ತಾಯಿಸಿ ತಹಶಿಲ್ದಾರರ ಮೂಲಕ ದೇಶದ ಪ್ರಧಾನಿ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರುದ್ರೇಶ ಹವಳದ, ಹನಮಂತಪ್ಪ ಮೇಟಿ, ಸಾಗರ ಗಾಯಕವಾಡ, ಮಹಮ್ಮದ್ ಮುಲ್ಲಾ, ಗುರಪ್ಪ ಹಳ್ಯಾಳ, ಮಹಮ್ಮದ್ ನದಾಫ್, ಶಂಕರ ಸಿದ್ದಾಪುರ, ಕುಮಾರ ಹೊಂಗಲ, ಗಂಗನಗೌಡ ನರಗುಂದ ಸೇರಿದಂತೆ ಮುಂತಾದವರು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss