ಫ್ರೀಡಂ ಪಾರ್ಕ್​ನಲ್ಲಿ ಪಿಎಸ್​ಐ ಅಭ್ಯರ್ಥಿಗಳ ಪ್ರತಿಭಟನೆ: ತನಿಖೆ ಆಗುವವರೆಗೂ ಯಾವ ಭರವಸೆ ಕೊಡಲ್ಲ ಎಂದ ಸಿಎಂ ಬೊಮ್ಮಾಯಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಆದ ಹಿನ್ನೆಲೆಯಲ್ಲಿ ರದ್ದು ರದ್ದುಪಡಿಸಿದ್ದ ಪಿಎಸ್​ಐ ಪರೀಕ್ಷೆಯನ್ನು ಮತ್ತೆ ನಡೆಸುವುದಾಗಿ ರಾಜ್ಯ ಸರ್ಕಾರ ಈ ಹಿಂದೆ ಆದೇಶ ಹೊರಡಿಸಿದ್ದು, ಈ ಹಿನ್ನೆಲೆ 300ಕ್ಕೂ ಹೆಚ್ಚು ಅಭ್ಯರ್ಥಿಗಳು ಮತ್ತು ಪೋಷಕರು ಸರಕಾರ ಈ ಆದೇಶವನ್ನು ಹಿಂಪಡೆಯಬೇಕು ಮತ್ತು ಅಕ್ರಮದಲ್ಲಿ ಭಾಗಿ ಆಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಯುತ್ತಿದ್ದ ಫ್ರೀಡಂ ಪಾರ್ಕ್​ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದು, ಪಿಎಸ್ಐ ಅಕ್ರಮದ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ. ಯಾರೆಲ್ಲಾ ಭಾಗಿಯಾಗಿದ್ದಾರೆ ಎಲ್ಲರಿಗೂ ಶಿಕ್ಷೆ ಖಂಡಿತವಾಗಿಯೂ ಆಗುತ್ತದೆ. ತನಿಖೆ ಆಗುವವರೆಗೂ ಕೂಡ ಪಿಎಸ್​ಐ ಅಭ್ಯರ್ಥಿಗಳು ಸಮಾಧಾನವಾಗಿ ಇರಿ. ನಾವು ಈಗ ಯಾವುದೇ ಭರವಸೆ ಕೊಡಲು ಸಾಧ್ಯ ಇಲ್ಲ. ತನಿಖೆ ಮುಗಿಯೋವರೆಗೂ ಕೂಡ ಭರವಸೆ ಕೊಡಲ್ಲ. ಮನವಿ ಪತ್ರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತೇನೆ ಎಂದರು.

ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!