ದಿಗಂತ ವರದಿ ಕಾರಟಗಿ:
ಪಿಎಸ್‌ಐ ಪರಶುರಾಮ ಪ್ರಕರಣವು ಸಿಬಿಐಗೆ ಕೊಡುವ ಅರ್ಹತೆ ಇಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸೋಮನಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಶಾಸಕರು ಹಾಗೂ ಅವರ ಪುತ್ರ ಹಣ ಕೇಳಿದ್ದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸಿಐಡಿಗೆ ಪ್ರಕರಣ ನೀಡಿದ್ದೇವೆ.
ಸ್ಥಳೀಯ ಅಧಿಕಾರಿಗಳಿಂದ ನ್ಯಾಯ ಸಿಗುವುದಿಲ್ಲ ಎಂದು ಅವರ ಕುಟುಂಬದವರು ಅನುಮಾನಿಸಿದ ಕಾರಣ ನೀಡಿದ್ದರು. ಅದಕ್ಕೆ ನೀಡಿದ್ದೇವೆ. ವರದಿ ಆಧರಿಸಿ ಕ್ರಮ ಮಾಡಲಾಗುವುದು. ವಿಪಕ್ಷದವರು ಹೇಳಿದ್ದನ್ನು ಕೇಳುವುದಿಲ್ಲ. ಪಿಎಸ್‌ಐ ಪರಶುರಾಮ ಪ್ರಕರಣವು ಸಿಬಿಐಗೆ ಕೊಡುವ ಅರ್ಹತೆ ಇಲ್ಲ. ಕಾರಣ ಕೊಡುವುದಿಲ್ಲ ಎಂದರು.