Tuesday, August 16, 2022

Latest Posts

ಎಸಿಬಿ ಬಲೆಗೆ ಬಿದ್ದ ಟ್ಯಾಕ್ಸಿ ಚಾಲಕನಿಂದ ಲಂಚ ಪಡೆಯುತ್ತಿದ್ದ ಪಿಎಸ್‌ಐ

ಹೊಸ ದಿಗಂತ ವರದಿ, ಮೈಸೂರು;

ಟ್ಯಾಕ್ಸಿ ಚಾಲಕನಿಂದ ಲಂಚ ಪಡೆಯುತ್ತಿದ್ದ ಜಿಲ್ಲೆ ಟಿ.ನರಸೀಪುರ ತಾಲೂಕಿನ
ತಲಕಾಡು ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಹಾಗೂ ಹೆಡ್ ಕಾನ್ಸಟೇಬಲ್ ಮಂಗಳವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಪಿಎಸ್ ಐ ಸಿದ್ದಯ್ಯ ಹಾಗೂ ಹೆಡ್ ಕಾನ್ಸಟೇಬಲ್ ಸತೀಶ್ ಬಲೆಗೆ ಬಿದ್ದವರು.ಇವರಿಬ್ಬರು ಟ್ಯಾಕ್ಸಿ ಚಾಲಕರೊಬ್ಬರಿಗೆ ಎನ್‌ಸಿಆರ್ ಪ್ರಕರಣ ಮುಕ್ತಾಯಗೊಳಿಸಲು 10 ಸಾವಿರಕ್ಕೆ ಡಿಮ್ಯಾಂಡ್ ಮಾಡಿ, ಮುಂಗಡವಾಗಿ 2.5 ಸಾವಿರ ರೂ ಪಡೆದಿದ್ದರು. ಉಳಿದ ಹಣ ನೀಡಲು ಒತ್ತಡ ಹೇರಿದ್ದರು. ಇದರಿಂದ ಬೇಸೆತ್ತ ಟ್ಯಾಕ್ಸಿ ಚಾಲಕ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದ ಪ್ರಕರಣ ದಾಖಲಿಸಿಕೊಂಡ ಎಸಿಬಿ ಅಧಿಕಾರಿಗಳು ಟ್ಯಾಕ್ಸಿ ಚಾಲಕನಿಂದ ಪಿಎಸ್ ಐ 5 ಸಾವಿರ ಹಾಗೂ ಹೆಡ್ ಕಾನ್ಸಟೇಬಲ್ 2.5 ಸಾವಿರ
ಠಾಣೆಯಲ್ಲಿ ಲಂಚ ಪಡೆಯುವಾಗ ದಾಳಿ ನಡೆಸಿ, ಇಬ್ಬರನ್ನೂ ಬಂಧಿಸಿದ್ದಾರೆ.
ಎಸಿಬಿ ಎಸ್ ಪಿ ಸಜಿತ್ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ತಮ್ಮಯ್ಯ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಇನ್ಸಪೆಕ್ಟರ್‌ಗಳಾದ ಚಿತ್‌ರಂಜನ್,ಮೋಹನ್ ಕೃಷ್ಣ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss