ಗೆಳೆಯರೊಂದಿಗೆ ಪತ್ನಿ ಮಲಗಿಸಿ ವಿಡಿಯೋ ಚಿತ್ರೀಕರಿಸಿದ ಸೈಕೋಪಾತ್ ಪತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೈಕೋಪಾತ್ ಪತಿಯೊಬ್ಬ ತನ್ನ ಹೆಂಡತಿಯನ್ನು ತನ್ನದೇ ಸ್ನೇಹಿತರ ಜೊತೆ ಮಲಗಿಸಿ ವಿಡಿಯೋ ಚಿತ್ರೀಕರಿಸಿದ್ದಾನೆ.

ಸೈಕೋ ಪತಿ ಸಂಪಿಗೆಹಳ್ಳಿ ನಿವಾಸಿ ಜಾನ್‌ಪಾಲ್. ಈತನನ್ನು ಯುವತಿಯೊಬ್ಬಳು ಮದುವೆಯಾಗಿದ್ದಳು. ಮದುವೆಯಾದ ನಾಲ್ಕು ವರ್ಷದ ನಂತರ ಜಾನ್ ಕಿರುಕುಳ ಆರಂಭಿಸಿದ್ದಾರೆ. ತನ್ನ ಗೆಳೆಯರನ್ನು ಮನೆಗೆ ಕರೆಸಿ ಪಾರ್ಟಿ ಮಾಡಿದ್ದಾನೆ. ಪಾರ್ಟಿ ನಂತರ ಬೆಡ್ ಶೇರ್ ಮಾಡು ಎಂದು ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ.

ಪತಿಯ ಹೊಡೆತಕ್ಕೆ ಹೆದರಿದ ಪತ್ನಿ ಬಲವಂತವಾಗಿ ದೈಹಿಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದ್ದಾಳೆ. ಈ ವೇಳೆ ಸ್ನೇಹಿತರ ಜೊತೆ ಇರುವ ಫೋಟೊ, ವಿಡಿಯೋವನ್ನು ಜಾನ್ ತೆಗೆದಿದ್ದಾನೆ.

ಗೆಳೆಯರಾದ ಸಜೀಶ್ ಹಾಗೂ ನಾಜಿ ಜೊತೆ ಮಲಗಿದ್ದ ವಿಡಿಯೋ ಮಾಡಿದ್ದ ಜಾನ್ ಹುಚ್ಚಾಟ ವಿಪರೀತವಾಗಿದ್ದು, ನಿನ್ನ ಜೊತೆ ನಿನ್ನ ತಂಗಿಯನ್ನೂ ಕರೆದುಕೊಂಡು ಬಾ ಎಂದು ಪತ್ನಿಗೆ ಹೊಡೆದಿದ್ದಾನೆ.

ಇದರಿಂದ ಬೇಸತ್ತ ಪತ್ನಿ ವಿಚ್ಛೇದನಕ್ಕೆ ಅರ್ಜಿ ನೀಡಿದ್ದಾಳೆ. ಆಗ ಪತಿ ಫೋಟೊ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ ಎಂದು ಹೆದರಿಸಿದ್ದಾನೆ. ಎಲ್ಲ ನೋವುಗಳನ್ನು ಸಹಿಸಿದ ಪತ್ನಿ ಕಡೆಯದಾಗಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾಳೆ.

ಗಾಂಜಾ ವ್ಯಸನಿಯಾದ ಜಾನ್ ಮನೆಯಲ್ಲಿಯೇ ಗಾಂಜಾ ಸಸ್ಯಗಳನ್ನು ಬೆಳೆದಿದ್ದಾನೆ. ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪತ್ನಿ ದೂರು ನೀಡಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!