ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸ ದಿಗಂತ ವರದಿ, ತಿಪಟೂರು:
ನಗರದ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಿ.ಸಿ.ನಾಗೇಶ್ ತಮ್ಮ ಅಜ್ಜ , ಅಜ್ಜಿ ಯಾದ ಬೆಳ್ಳೂರು ಕಮಲಮ್ಮ ಮತ್ತು ಸುಬ್ಬಣ್ಣ ಇವರ ಸ್ಮರಣಾರ್ಥ ಸುಮಾರು 8 ಲಕ್ಷ ರೂಗಳ ವೆಚ್ಚದ 10 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.
ಕೊವಿಡ್-19 ರ ಮಹಾಮಾರಿ ಎರಡನೇ ಅಲೆಯಿಂದ ಜನರು ತತ್ತರಿಸಿದ್ದಾರೆ. ರೂಪಾಂತರಿ ವೈರಸ್ ನಿಂದ ಆಮ್ಲಜನಕ ಏರಿಳಿತದಿಂದ ಸಾವು, ನೋವು ಹೆಚ್ಚು ಸಂಭವಿಸುತ್ತಿದೆ. ಈ ದೃಷ್ಟಿಯಿಂದ ಆಮ್ಲಜನಕ ಮಟ್ಟ ಕುಸಿತಕಂಡ ರೋಗಿಗಳ ಉಪಯೋಗಕ್ಕಾಗಿ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ನೀಡಲಾಗಿದ್ದು ಇದರ ಸದ್ಬಳಕೆಗೆ ವೈದ್ಯರು ನಿಗಾವಹಿಸುವಂತೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಆರ್.ಜಿ.ಚಂದ್ರಶೇಖರ್, ವೈದ್ಯಾಧಿಕಾರಿ ಡಾ.ಪ್ರಹ್ಲಾದ್ , ಡಿವೈಎಸ್ ಪಿ ಚಂದನ್ ಕುಮಾರ್, ತಾ ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ , ತಾಲ್ಲೂಕು ವೈದ್ಯಾಧಿಕಾರಿ ರವಿಕುಮಾರ್ ಹಾಗೂ ಕುಟುಂಬ ಸದಸ್ಯ ಶ್ರೀಕಂಠ ಉಪಸ್ಥಿತರಿದ್ದರು.