Thursday, July 7, 2022

Latest Posts

ಕರ್ನಾಟಕ ಸಂಭಾವ್ಯ ರಣಜಿ ತಂಡ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಂಬರುವ ರಣಜಿ ಟ್ರೋಫಿಗಾಗಿ ಕರ್ನಾಟಕ ತಂಡದ ಸಂಭಾವ್ಯ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಒಟ್ಟು 28  ಮಂದಿ ಇದ್ದು, ಟೀಂ ಇಂಡಿಯಾಗೆ ಆಡುತ್ತಿರುವ ಕೆ.ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಹೆಸರೂ ಕೂಡ ಇದರಲ್ಲಿದೆ.
ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದಲ್ಲಿದ್ದು, ಜ.23 ರಂದು ಸರಣಿ ಕೊನೆಗೊಳ್ಳಲಿದೆ. ಅದೇ ಕಾರಣದಿಂದ ಇವರಿಬ್ಬರ ಹೆಸರನ್ನು ರಣಜಿ ಟೂರ್ನಿಗೆ ಪರಿಗಣಿಸಲಾಗಿದೆ.
ಪಟ್ಟಿಯಲ್ಲಿ ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಡಿ.ನಿಶ್ಚಲ್, ಆರ್.ಸಮರ್ಥ್, ಕೆ.ವಿ.ಸಿದ್ಧಾರ್ಥ್, ಕೆ.ವಿ. ಅನೀಶ್, ಅಭಿನವ್ ಮನೋಹರ್, ವಿಶಾಲ್ ಒನತ್, ಸುಜಿತ್ ಜೆ.,ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ರಿತೇಶ್ ಭಟ್ಕಳ, ಕೆ.ಸಿ.ಕಾರ್ಯಪ್ಪ, ಪ್ರಸಿದ್ಧ್ ಕೃಷ್ಣ, ಶುಭಾಂಗ್ ಹೆಗಡೆ, ಎಂ.ವೆಂಕಟೇಶ್, ವೈಶಾಖ ವಿಜಯ್‌ಕುಮಾರ್, ವಿದ್ಯಾಧರ್ ಪಾಟೀಲ್, ಬಿ.ಆರ್. ಶರತ್, ಶರತ್ ಶ್ರೀನಿವಾಸ್, ಚಿನ್ಮಯ್ ಎನ್ ಹಾಗೂ ಕೃತಿಕ್ ಕೃಷ್ಣ ಅವರ ಹೆಸರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss