Wednesday, June 29, 2022

Latest Posts

ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಹೊಸದಿಗಂತ ವರದಿ, ಬಳ್ಳಾರಿ:

ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಪಿಯು ಸ್ವತಂತ್ರ ಕಾಲೇಜಿನ (ಕಲಾ ವಿಭಾಗ) ವಿದ್ಯಾರ್ಥಿಗಳಾದ ಶ್ವೇತಾ ಭೀಮಾಶಂಕರ್ ಹಾಗೂ ಮಡಿವಾಳರ್ ಸಹನಾ ಅವರು ರಾಜ್ಯಕ್ಕೆ ಮೊದಲ ಸ್ಥಾನವನ್ನು ಪಡೆಯುವ ಮೂಲಕ ಕಾಲೇಜಿನ, ಜಿಲ್ಲೆಯ, ಪಾಲಕರ ಕೀರ್ತಿ ಹೆಚ್ಚಿಸಿದ್ದಾರೆ.
ಕಳೆದ 7ವರ್ಷಗಳಿಂದ ಕಾಲೇಜಿನ ವಿದ್ಯಾರ್ಥಿಗಳು ಅತಿಹೆಚ್ಚು ಅಂಕಗಳನ್ನು ಪಡೆದು ರಾಜ್ಯದ ಗಮನಸೆಳೆಯುತ್ತಿದ್ದು, ಈ ವರ್ಷವೂ ಕಾಲೇಜಿನ ಶ್ವೇತಾ ಭೀಮಾಶಂಕರ್ ಭೈರಗೊಂಡ (594) ಹಾಗೂ ಮಡಿವಾಳರ್ ಸಹನಾ ಅವರು (594)ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಇದೇ ಕಾಲೇಜಿನ ಇನ್ನೋಬ್ಬ ವಿದ್ಯಾರ್ಥಿ ಮೌನೇಶ್ ಜಿ. (593) ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಕಾಲೇಜಿನ ಸಮೀರ್ ಖೇಮಣ್ಣ, ಶಾಂತ ಜಿ. ಕಾವೇರಿ ಜಗ್ಗಳ್ ಅವರು (592) ಅಂಕಗಳನ್ನು ಪಡೆದು ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ಕಾಲೇಜಿನ 6 ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಪರಿಶ್ರಮ, ಪಾಲಕರ ಸಹಕಾರ, ಕಾಲೇಜಿನ ಉಪನ್ಯಾಸಕರ ಶ್ರಮ, ಸಹಕಾರ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಕೌಶಲ ಭರಿತ ಗುಣಮಟ್ಟದ ಶಿಕ್ಷಣದಿಂದ ಇಂದು ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ಹಾಗೂ ಎರಡನೇ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಿದೆ, ಎಲ್ಲ ಉಪನ್ಯಾಸಕರ ವರ್ಗಕ್ಕೆ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss