ಭಿಕ್ಷುಕರ ಮೇಲೆ ಬಿಸಿನೀರು ಸುರಿದ ಹೋಟೆಲ್ ಮಾಲೀಕ: ಮೂವರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿತ್ಯವೂ ಮೂವರು ಭಿಕ್ಷುಕರು ತಮ್ಮ ಹೋಟೆಲ್ ಮುಂದೆ ಕುಳಿತು ಭಿಕ್ಷೆ ಬೇಡುತ್ತಾರೆ ಎಂದು ಕೋಪಗೊಂಡ ಹೋಟೆಲ್ ಮಾಲೀಕ, ಮೂವರು ಭಿಕ್ಷುಕರ ಮೇಲೆ ಕುದಿಯುವ ನೀರು ಸುರಿದ ದಾರುಣ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಘಟನೆಯಿಂದ ಮೂವರು ಭಿಕ್ಷುಕರು ಸಾವನ್ನಪ್ಪಿದ್ದಾರೆ. ಪುಣೆಯ ಉಪನಗರವಾದ ಸಾಸ್ವಾದ್‌ನಲ್ಲಿ ಮೇ 23 ರಂದು ಈ ಘಟನೆ ನಡೆದಿದ್ದು, ಶುಕ್ರವಾರ ಪ್ರಕರಣ ಬೆಳಕಿಗೆ ಬಂದಿದೆ.

ಸಾಸ್ವಾದ್‌ನಲ್ಲಿರುವ ನಿಲೇಶ್ ಜಯವಂತ ಜಗ್ತಾಪ್ ಎಂಬ ವ್ಯಕ್ತಿ ಅಹಲ್ಯಾದೇವಿ ಮಾರುಕಟ್ಟೆಯಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಸದಾ ತನ್ನ ಹೋಟೆಲ್ ಮುಂದೆ ಕೂತಿದ್ದ ಮೂವರು ಭಿಕ್ಷುಕರಿಗೆ ಛೀಮಾರಿ ಹಾಕಿ ಅಲ್ಲಿಂದ ಹೊರಡುವಂತೆ ತಾಕೀತು ಮಾಡಿದರು. ಮೂವರೂ ತಮ್ಮ  ಮಾತು ಕೇಳಲಿಲ್ಲ ಎಂದು ಸಿಟ್ಟಿಗೆದ್ದ ಮಾಲೀಕ ಮೇ 23ರಂದು ಇವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಹಲ್ಲೆ ಮಾಡಿದ್ದು, ಸಾಲದೆಂಬಂತೆ ಜಯವಂತ್ ಭಿಕ್ಷುಕರ ಮೇಲೆ ಕುದಿಯುತ್ತಿರುವ ಬಿಸಿನೀರನ್ನು ಸುರಿದಿದ್ದಾನೆ. ಥಿವ್ರ ಸುಟ್ಟ ಗಾಯಗಳಿಂದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆ ನಡೆದ ಸ್ಥಳದಿಂದ ಪೊಲೀಸ್ ಠಾಣೆ ಕೇವಲ ಕಲ್ಲೆಸೆತ ದೂರದಲ್ಲಿದೆ. ಶವಗಳು 36 ಗಂಟೆಗಳ ಕಾಲ ರಸ್ತೆಯಲ್ಲೇ ಇದ್ದರೂ ಪೊಲೀಸರ ಗಮನಕ್ಕೆ ಬಂದಿಲ್ಲ. ಹೋಟೆಲ್‌ ಮಾಲೀಕನ ಹೇಯ ಕೃತ್ಯವನ್ನು ಖಂಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೇ 30ರಂದು ಹೋಟೆಲ್ ಮಾಲೀಕರ ಅನುಚಿತ ವರ್ತನೆ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಾಲೀಖ ಸ್ಥಳೀಯ ಶಾಸಕರೊಬ್ಬರ ಸಂಬಂಧಿಯಾಗಿದ್ದಾರೆ. ಹಾಗಾಗಿ ಅವರ ಮೇಲೆ ಕೇಸ್‌ ದಾಖಲಿಸಲು ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!