Monday, November 28, 2022

Latest Posts

ಅಪಘಾತದಲ್ಲಿ ಕಣ್ಣೆದುರೇ ಗರ್ಭಿಣಿ ಪತ್ನಿ ಸಾವು: ಆಘಾತ ತಾಳಲಾರದೆ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಣೆದುರೇ ನಡೆದ ಅಪಘಾತದಲ್ಲಿ ತನ್ನ 23 ವರ್ಷದ ಗರ್ಭಿಣಿ ಪತ್ನಿ ಸಾವನ್ನಪ್ಪಿದ್ದರಿಂದ ಮಾನಸಿಕ ಆಘಾತಕ್ಕೊಳಗಾದ ಪತಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಣೆ ಜಿಲ್ಲೆಯ ಜುನ್ನಾರ್ ತಾಲೂಕಿನಲ್ಲಿ ನಡೆದಿದೆ.
ಜುನ್ನಾರದ ಧೋಂಡಕರವಾಡಿ ನಿಮ್ದಾರಿ ನಿವಾಸಿ ರಮೇಶ ನವನಾಥ ಕಂಸ್ಕರ್ (29) ಮತ್ತು ವಿದ್ಯಾ ಪ್ರೇಮ ವಿವಾಹವಾಗಿದ್ದರು. ಮದುವೆಗೆ ಮುನ್ನ ಆಕೆಯ ಕೆಲವು ಶಿಕ್ಷಣ ವೆಚ್ಚವನ್ನು ರಮೇಶ್ ಭರಿಸಿದ್ದರು. ವಿದ್ಯಾಗೆ ತಾಯಿ ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ಹಾಗಾಗಿ ರಮೇಶ ತನ್ನ ತಾಯಿಯೊಂದಿಗೆ ವಿದ್ಯಾಳನ್ನು ನೋಡಿಕೊಳ್ಳುತ್ತಿದ್ದ. ಎಂಟು ತಿಂಗಳ ಹಿಂದೆ ಇವರಿಬ್ಬರ ವಿವಾಹವಾಗಿತ್ತು. ವಿದ್ಯಾ ಒಂದು ತಿಂಗಳ ಗರ್ಭಿಣಿ ಸಹ ಆಗಿದ್ದಳು.
ನ.14ರಂದು ರಮೇಶ್, ವಿದ್ಯಾ ಮತ್ತು ತಾಯಿ ವಿಮಲ್ ಜಾಧವ್ ಅವರೊಂದಿಗೆ ಚಿನ್ನಾಭರಣ ಖರೀದಿಸಲು ನಾರಾಯಣನಗರಕ್ಕೆ ಬಂದಿದ್ದರು. ಶಾಪಿಂಗ್ ಮುಗಿಸಿ ಬೈಕ್ ನಲ್ಲಿ ಮನೆಗೆ ಹೋಗುತ್ತಿದ್ದಾಗ ಹಾಲಿನ ಡೇರಿ ಎದುರು ಟ್ರಾಫಿಕ್ ಜಾಮ್ ಆಗಿದ್ದರಿಂದ ವಿದ್ಯಾ ಬೈಕ್ ನಿಂದ ಇಳಿದಿದ್ದಾರೆ. ಅದೇ ಸಮಯಕ್ಕೆ ಎದುರಿನಿಂದ ಎರಡು ಟ್ರಾಲಿಗಳಲ್ಲಿ ಕಬ್ಬು ತುಂಬಿಕೊಂಡು ಟ್ರ್ಯಾಕ್ಟರ್ ಬರುತ್ತಿತ್ತು. ವಿದ್ಯಾಗೆ ಅರಿವಾಗುವ ಮುನ್ನವೇ ಟ್ರಕ್  ಡಿಕ್ಕಿಯಾಗಿ ಆಕೆ ಚಕ್ರದಡಿ ಬಿದ್ದಿದ್ದಾಳೆ. ಪತಿ ರಮೇಶ್‌ ಕಣ್ಣೆದುರೇ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.  ಪತ್ನಿಯ ಭೀಕರ ಸಾವು ನೋಡಿದ ರಮೇಶ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಅಪಘಾತಕ್ಕೆ ನಾನೇ ಕಾರಣ ಎಂದು ಭಾವಿಸಿದ್ದರು. ಅದೇ ಸ್ಥಿತಿಯಲ್ಲಿ ಮೂರು ದಿನಗಳ ಬಳಿಕ ಮಧ್ಯರಾತ್ರಿ ವಿಷ ಸೇವಿಸಿದ್ದಾರೆ. ಬೆಳಗ್ಗೆ ವಾಂತಿಭೇದಿ ಕಾಣಿಸಿಕೊಂಡಿದ್ದರಿಂದ ಮನೆಯವರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಮೇಶರನ್ನು ಆರಂಭದಲ್ಲಿ ಜುನ್ನಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ನಾರಾಯಣಗೌಡ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟರಲ್ಲಿ ಆತ ಮೃತಪಟ್ಟಿದ್ದಾನೆ. ಅವರು ತಂದೆ-ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!