Saturday, August 13, 2022

Latest Posts

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಅಪ್ಪು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನಟ ಪುನೀತ್ ರಾಜಕುಮಾರ್ ಅಕಾಲಿಕ ಸಾವು ಕೇವಲ ಚಿತ್ರರಂಗ ಮಾತ್ರವಲ್ಲ, ಇಡೀ ಕರುನಾಡಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿದೆ. ಈ ಮಧ್ಯೆ ಅಪ್ಪು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಹೌದು.. ಪುನೀತ್ ರಾಜಕುಮಾರ್ ಬದುಕಿದ್ದಾಗಲೇ ನೇತ್ರದಾನಕ್ಕೆ ಸಹಿ ಹಾಕಿದ್ದರು. ಇದರೊಂದಿಗೆ  ಪುನೀತ್ ತಂದೆ ರಾಜ ಕುಮಾರ್ ಹಾದಿಯಲ್ಲೇ ಸಾಗಿದ್ದಾರೆ. ಪುನೀತ್ ಮಾತ್ರವಲ್ಲ ಇಡೀ ರಾಜ್ ಕುಟುಂಬವೇ ನೇತ್ರದಾನಕ್ಕೆ ನಿರ್ಧರಿಸಿದ್ದಾರೆ .

ಕೇವಲ 46ವರ್ಷಕ್ಕೆ ಪುನೀತ್ ಅವರ ಜೀವನ ಅಂತ್ಯಗೊಂಡಿದ್ದು,  46ವರ್ಷಕ್ಕೆ 49 ಸಿನಿಮಾಗಳಲ್ಲಿ ನಟಿಸಿರುವ ಪುನೀತ್​ ​ ಅಕಾಲಿಕರ ಮರಣ ಇದೀಗ ದೊಡ್ಡ ಶಾಕ್​ ತಂದಿದೆ. ವಯಸ್ಸಿನಲ್ಲೂ, ಸಿನಿಮಾದಲ್ಲೂ ಅವರು 50ರ ಸಂಖ್ಯೆಯನ್ನು ಮುಟ್ಟಲಿಲ್ಲ ಎಂಬ ಕೊರಗೂ ಕಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss