Friday, August 12, 2022

Latest Posts

ನಟ ದಿಲೀಪ್​ ಕುಮಾರ್​ ಅವರನ್ನು ನೆನಪಿಸಿಕೊಂಡ ಪುನೀತ್​ ರಾಜ್​ಕುಮಾರ್​

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ಚಿತ್ರರಂಗದ ದಿಗ್ಗಜ ನಟ ದಿಲೀಪ್​ ಕುಮಾರ್​ ಅವರು ಇಂದು ನಿಧನರಾದರು. ಅವರ ಜೊತೆ ಒಡನಾಡಿದ ಅನೇಕರು ತಮ್ಮ ನೆನಪಿನ ಪುಟ ತೆರೆಯುತ್ತಿದ್ದಾರೆ. ನಟ ಪುನೀತ್​ ರಾಜ್​ಕುಮಾರ್​ ಕೂಡ ಒಂದೆರಡು ಬಾರಿ ದಿಲೀಪ್​ ಕುಮಾರ್​ ಅವರನ್ನು ಭೇಟಿ ಮಾಡಿದ್ದರು. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ಸಮೇತ ಮಾಹಿತಿ ಹಂಚಿಕೊಂಡಿರುವ ಪುನೀತ್​ ಅವರು ದಿಲೀಪ್​ ಕುಮಾರ್​ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
5 ದಶಕಗಳ ಕಾಲ ಬಾಲಿವುಡ್​ನಲ್ಲಿ ಸ್ಟಾರ್​ ಆಗಿ ಮಿಂಚಿದ ದಿಲೀಪ್​ ಕುಮಾರ್​ಗೆ ಕರುನಾಡು ಮತ್ತು ಕನ್ನಡ ಚಿತ್ರರಂಗದ ಜೊತೆಗೆ ಒಡನಾಟ ಇತ್ತು. ಚಂದನವನದ ಮೇರು ನಟ ಡಾ. ರಾಜ್​ಕುಮಾರ್​ ಮತ್ತು ದಿಲೀಪ್​ ಕುಮಾರ್​ ಅನೇಕ ಸಂದರ್ಭಗಳಲ್ಲಿ ಭೇಟಿ ಆಗಿದ್ದರು. ಅದನ್ನು ಈಗ ಪುನೀತ್​ ನೆನಪಿಸಿಕೊಂಡಿದ್ದಾರೆ. ‘ಎರಡು ಬಾರಿ ದಿಲೀಪ್​ ಕುಮಾರ್​ ಅವನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಅವರು ಹೇಳಿದ್ದಾರೆ.
‘ಅಪ್ಪಾಜಿ (ಡಾ. ರಾಜ್​ಕುಮಾರ್​) ಮತ್ತು ದಿಲೀಪ್​ ಕುಮಾರ್​ ಅವರು ಪರಸ್ಪರ ಆದರದ ಭಾವ ಮತ್ತು ಗೌರವವನ್ನು ಹೊಂದಿದ್ದರು. ಅಪ್ಪಾಜಿ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿ ಪಡೆಯುವಾಗ ನಾನು ಅವರನ್ನು ಭೇಟಿಯಾಗಿದ್ದು ನೆನಪಾಗುತ್ತಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಯ ಕಾರಣಕ್ಕಾಗಿ ಅವರನ್ನು ಎಂದಿಗೂ ಸ್ಮರಿಸಲಾಗುವುದು’ ಎಂದು ಟ್ವೀಟ್ ಮಾಡಿರುವ ಪುನೀತ್​ ಅವರು ಅಪರೂಪದ ಒಂದು ಫೋಟೋ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss