ಹೊಸದಿಗಂತ ವರದಿ, ಸುಂಟಿಕೊಪ್ಪ:
ಪ್ರತಿಭಾನ್ವಿತ ನಾಯಕ ನಟ, ದಾನಿಪುನೀತ್ ರಾಜ್ ಕುಮಾರ್ ಅವರಿಗೆ ಕನ್ನಡ ವೃತ್ತದಲ್ಲಿ ಸುಂಟಿಕೊಪ್ಪ ಗ್ರಾಮಸ್ಥರ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸುಂಟಿಕೊಪ್ಪ ಕನ್ನಡಾಭಿಮಾನ ಸಂಘ, ತಲೆಹೊರೆ ಕಾರ್ಮಿಕರ ಸಂಘ, ಡಾ. ಬಿ.ಆರ್. ಅಂಬೇಡ್ಕರ್ ಸಂಘ, ಬ್ಲೂ ಬಾಯ್ಸ್ ಯುವಕ ಸಂಘ, ಟೈಲರ್ ಸಂಘ, ಆಟೋ ಚಾಲಕರ ಸಂಘ, ವಾಹನ ಮಾಲಕರ ಚಾಲಕರ ಸಂಘ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಸಾರ್ವಜನಿಕರು, ಕನ್ನಡ ವೃತ್ತದಲ್ಲಿ ನಟ ಪುನೀತ್ ರಾಜ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂಧರ್ಭ ಮಾತನಾಡಿದ ಸುಂಟಿಕೊಪ್ಪ ನಗರ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬಿ.ಕೆ.ಪ್ರಶಾಂತ್, ಸಿನಿಮಾ ರಂಗದಲ್ಲಿ ಹಂತಹಂತವಾಗಿ ಮೇಲೆರಿದ್ದ ಪುನೀತ್ ಅವರುತನ್ನ ಗೌರವ, ಪ್ರತಿಷ್ಠೆಯನ್ನು ಉಳಿಸಿಕೊಂಡು ಜನವಲಯದಲ್ಲಿ ಇಂದಿಗೂ ನೆನಪಿನ ಶಕ್ತಿಯಾಗಿ ಮೂಡಿಬಂದಿದ್ದಾರೆ. ನಟನೆಯ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಅವರು ಅನಾಥಾಶ್ರಮ, ಉಚಿತ ಶಾಲೆ, ವೃದ್ಧಾಶ್ರಮ, ಗೋ ಶಾಲೆ, ಹಲವಾರು ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರು. ಇಂತಹ ಮಹಾನ್ ಚೇತನವನ್ನು ಕಳೆದುಕೊಂಡಿರುವುದು ಕರ್ನಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ನುಡಿದರು.