Wednesday, August 10, 2022

Latest Posts

ಅಭಿಮಾನಿಗಳಿಗೆ ಪುನೀತ್ ಸಮಾಧಿ ದರುಶನಕ್ಕೆ ಅವಕಾಶ: ಸಚಿವ ಕೆ ಗೋಪಾಲಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಭಿಮಾನಿಗಳಿಗೆ ಪುನೀತ್ ರಾಜ್​ಕುಮಾರ್​​ ಸಮಾಧಿ ದರುಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಹೇಳಿದರು.
ಕಂಠೀರವ ಸ್ಟುಡಿಯೋದಲ್ಲಿಂದು ಪುನೀತ್ ರಾಜ್​​ಕುಮಾರ್ ಅವರ ಸಮಾಧಿಗೆ ಕುಟುಂಬ ವರ್ಗ ಹಾಲು-ತುಪ್ಪ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಾಡಿನ ಜನ ಬೆಲೆ ಕಟ್ಟಲಾಗದ ವಸ್ತು ಕಳೆದುಕೊಂಡಿದ್ದೇವೆ. 11ನೇ ದಿನಕ್ಕೆ ಪುನೀತ್ ಸ್ಮರಣೋತ್ಸವ ಕಾರ್ಯಕ್ರಮ ನಡೆಸಲು ಕುಟುಂಬದವರು ತೀರ್ಮಾನ ಮಾಡಿದ್ದಾರೆ ಎಂದರು.
ಪುನೀತ್ ಸಮಾಧಿ ದರುಶನಕ್ಕೆ ಅವಕಾಶ ಮಾಡಿಕೊಡುವ ಕುರಿತು ಅಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ. ದೂರದ ಊರಿನಿಂದ ಆಗಮಿಸುವ ಪುನೀತ್ ಅಭಿಮಾನಿಗಳಿಗೆ ಅವಕಾಶ ಮಾಡಿ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದನ್ನು ಅಧಿಕಾರಿಗಳು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss