ಫೈನಲ್ ಜಿದ್ದಾಜಿದ್ದಿನಲ್ಲಿ ಮುಂಬೈ ಮಣಿಸಿದ ಪಂಜಾಬ್.. ನಾಳೆ ರಾಯಲ್ಸ್ ಜೊತೆ ಕಿಂಗ್ಸ್ ಬಿಗ್ ಫೈಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ವಾಲಿಫೈಯರ್‌-2ನಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ರೋಚಕ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಂಜಾಬ್‌ ಐಪಿಎಲ್‌ ಫೈನಲ್‌ಗೆ ಲಗ್ಗೆ ಇಟ್ಟಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಬಗ್ಗು ಬಡಿದ ಪಂಜಾಬ್‌ 2ನೇ ಬಾರಿ ಫೈನಲ್‌ಗೆ ತಲುಪಿದ್ದು ನಾಳೆ ಆರ್‌ಸಿಬಿಯನ್ನು ಫೈನಲ್ ಕದನದಲ್ಲಿ ಎದುರಿಸಲಿದೆ.

ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ಶ್ರೇಯಸ್‌ ಅಯ್ಯರ್‌ ಸ್ಫೋಟಕ ಅರ್ಧಶತಕದ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ಜಯ ಸಾಧಿಸಿತು.

ಐಪಿಎಲ್‌ನಲ್ಲಿಎರಡನೇ ಬಾರಿ ಪಂಜಾಬ್ ಫೈನಲ್‌ ಪ್ರವೇಶಿಸಿದೆ. 11 ವರ್ಷಗಳ ಹಿಂದೆ 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಅಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!