ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚೆನ್ನೈ ಬೌಲಿಂಗ್​ ದಾಳಿಗೆ ಮಂಕಾದ ಪಂಜಾಬ್: ಗೆಲುವಿಗೆ 106 ರನ್ ಗಳ ಟಾರ್ಗೆಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್​ ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲಿಂಗ್​ ದಾಳಿಗೆ ಪಂಜಾಬ್ 8 ವಿಕೆಟ್ ​ಕಳೆದುಕೊಂಡು ಕೇವಲ 106 ರನ್​ಗಳಿಕೆ ಮಾಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದ ಪಂಜಾಬ್​ ಆರಂಭದಿಂದಲೂ ವಿಕೆಟ್ ಕಳೆದುಕೊಂಡಿದ್ದು, ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ಮಯಾಂಕ್​ ಹಾಗೂ ಕ್ಯಾಪ್ಟನ್ ರಾಹುಲ್​ ನಿರಾಸೆ ಮೂಡಿಸಿದರು.
ಚೆನ್ನೈ ಪರ ಮೊದಲ ಓವರ್​​ ಎಸೆದ ದೀಪಕ್​ ಚಹರ್​ ಓವರ್​ನಲ್ಲೇ ಮಯಾಂಕ್​(0) ವಿಕೆಟ್ ಒಪ್ಪಿಸಿದರೆ, ರಾಹುಲ್​(5)ರನ್​ಗಳಿಕೆ ಮಾಡಿದ್ದ ವೇಳೆ ರನೌಟ್ ಬಲೆಗೆ ಬಿದ್ದರು.ಇದಾದ ಬಳಿಕ ಬಂದ ಕ್ರಿಸ್ ಗೇಲ್​(10), ದೀಪಕ್​ ಹೂಡಾ(10), ಪೂರನ್​ (0) ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದ್ದರಿಂದ ತಂಡ 4.4 ಓವರ್​ಗಳಲ್ಲಿ ಕೇವಲ 26 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತು.
ಈ ವೇಳೆ ಒಂದಾದ ಶಾರೂಕ್ ಖಾನ್​ – ರಿಚರ್ಡ್ಸನ್​ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು. ಆದರೆ 15 ರನ್​ಗಳಿಕೆ ಮಾಡಿದ್ದ ವೇಳೆ ಮೊಯಿನ್ ಅಲಿ ಬೌಲಿಂಗ್​ನಲ್ಲಿ ರಿಚರ್ಡ್ಸನ್​ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಶಾರೂಕ್ ಖಾನ್(47) ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಮುರ್ಗನ್​ ಅಶ್ವಿನ್​(6), ಶಮಿ ಅಜೇಯ(9)ರನ್​ಗಳಿಕೆ ಮಾಡಿದ್ದರಿಂದ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 106 ರನ್​ಗಳಿಕೆ ಮಾಡಿದ್ದು, ಚೆನ್ನೈಗೆ 107ರನ್​ಗಳ ಸುಲಭ ಗುರಿ ನೀಡಿದೆ.
ಚೆನ್ನೈ ಪರ ಮಾರಕ ಬೌಲಿಂಗ್​ ಪ್ರದರ್ಶನ ನೀಡಿದ ದೀಪಕ್​ ಚಹರ್​​ 4 ಓವರ್​ಗಳಲ್ಲಿ 13 ರನ್​ ನೀಡಿ ಪ್ರಮುಖ 4 ವಿಕೆಟ್​ ಪಡೆದುಕೊಂಡರೆ, ಸ್ಯಾಮ್​ ಕರ್ರನ್​, ಮೊಯಿನ್ ಅಲಿ, ಡ್ವೇನ್​ ಬ್ರಾವೋ ತಲಾ 1ವಿಕೆಟ್ ಕಬಳಿಸಿ ತಂಡಕ್ಕೆ ಮೆಲುಗೈ ತಂದುಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss