spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಂಬೈ ಬೌಲಿಂಗ್ ದಾಳಿಗೆ ಮಂಕಾದ ಪಂಜಾಬ್: ಗೆಲುವಿಗೆ 136 ರನ್ ಟಾರ್ಗೆಟ್

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ದಾಳಿಗೆ ಮಂಕಾದ ಪಂಜಾಬ್ ಕಿಂಗ್ಸ್ ತಂಡ ಕೇವಲ136ರನ್​ಗಳ ಸಾಧಾರಣ ಗುರಿ ನೀಡಿದೆ.
ಎರಡೂ ತಂಡಗಳಿಗೂ ನಿರ್ಣಾಯಕವಾಗಿದ್ದ ಈ ಪಂದ್ಯದಲ್ಲಿ ಮುಂಬೈ ನಾಯಕ ರೋಹಿತ್ ಶರ್ಮಾ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮಯಾಂಕ್​ ಅನುಪಸ್ಥಿತಿಯಲ್ಲಿ ರಾಹುಲ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮಂದೀಪ್ ಸಿಂಗ್ ಕೇವಲ 15 ರನ್​ಗಳಿಸಿ ಕೃನಾಲ್ ಪಾಂಡ್ಯಗೆ ವಿಕೆಟ್​ ಒಪ್ಪಿಸಿದರು. 6ನೇ ಓವರ್​ನಲ್ಲೇ ಕೀರನ್ ಪೊಲಾರ್ಡ್​ ಕ್ರಿಸ್​ ಗೇಲ್(1) ಮತ್ತು ಎದುರಾಳಿ ನಾಯಕ ರಾಹುಲ್​(21) ರನ್ನು ಒಂದೇ ಓವರ್​ನಲ್ಲಿ ಪೆವಿಲಿಯನ್​ಗಟ್ಟಿದರು.
ಆರಂಭಿಕ 3 ಬ್ಯಾಟರ್​ಗಳು ಪೆವಿಲಿಯನ್​ ಸೇರಿದ ಮೇಲೆ ವಿಂಡೀಸ್ ಸ್ಟಾರ್​ ಪೂರನ್​ ಕೂಡ ಬುಮ್ರಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಕೇವಲ 48 ರನ್​ಗಳಾಗುವಷ್ಟರಲ್ಲಿ ಪಂಜಾಬ್ 4 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಯಿತು.
ಆದರೆ ಐಡೆನ್ ಮಾರ್ಕ್ರಮ್​ 29 ಎಸೆತಗಳಲ್ಲಿ 42 ರನ್​ ಹಾಗೂ ದೀಪಕ್ ಹೂಡ 26 ಎಸೆತಗಳಲ್ಲಿ 28 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಹರ್​​ಪ್ರೀತ್ ಬ್ರಾರ್​ 14 ರನ್​ಗಳಿಸಿ ಅಜೇಯರಾಗುಳಿದರು.
ಮುಂಬೈ ಪರ ಬುಮ್ರಾ 24ಕ್ಕೆ 2, ಕೀರನ್ ಪೊಲಾರ್ಡ್​ 8ಕ್ಕೆ2, ಕೃನಾಲ್ ಮತ್ತು ರಾಹುಲ್ ಚಹರ್ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss