ಪಂಜಾಬ್‌ ಚುನಾವಣೆ: ಮತಗಟ್ಟೆಗೆ ಭೇಟಿ ನೀಡದಂತೆ ನಟ ಸೋನು ಸೂದ್ ಗೆ ನಿರ್ಬಂಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ, ಸಮಾಜಸೇವಕ ಸೋನು ಸೂದ್ ಗೆ ಪಂಜಾಬ್‌ನ ಮೋಗಾದಲ್ಲಿನ ಮತಗಟ್ಟೆಗಳಿಗೆ ಭೇಟಿ ನೀಡದಂತೆ ಚುನಾವಣಾ ಆಯೋಗ ನಿರ್ಬಂಧಿಸಿದೆ.
ಪಂಜಾಬ್ ವಿಧಾನಸಭಾ ಚುನಾವಣೆಯ ಮತದಾನ ನಡೆಯುತ್ತಿದ್ದು, ಇದರ ಜೊತೆಗೆ ಚುನಾವಣೆಯಲ್ಲಿ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಸ್ಪರ್ಧಿಸುತ್ತಿದ್ದಾರೆ.
ಈ ಹಿನ್ನೆಲೆ ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆ ನಟ ಸೋನು ಸೂದ್ ಗೆನಿರ್ಬಂಧ ಹೇರಲಾಗಿದೆ.
ಕಳೆದ ಹಲವು ದಿನಗಳಿಂದ ಸಹೋದರಿ ಮಾಳವಿಕಾ ಸೂದ್ ಸಾಚಾರ್ ಅವರನ್ನು ಪ್ರಚಾರ ನಡೆಸಿದ್ದರು.
ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್ ಅಲಿಯಾಸ್ ಮಖಾನ್ ಬ್ರಾರ್ ಅವರ ಬೆಂಬಲಿಗರ ದೂರಿನ ಮೇರೆಗೆ ಸೋನು ಸೂದ್ ಅವರ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೋನು ಸೂದ್ ಅವರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಆದರೆ,ಸೋನು ಸೂದ್ ತಮ್ಮ ಮೇಲಿರುವ ಆರೋಪವನ್ನು ನಿರಾಕರಿಸಿದ್ದು, ನಾನು ಸ್ಥಳೀಯ ನಿವಾಸಿ. ನಾನು ಯಾವುದೇ ನಿರ್ದಿಷ್ಟ ಅಭ್ಯರ್ಥಿ ಅಥವಾ ಪಕ್ಷಕ್ಕೆ ಮತ ನೀಡುವಂತೆ ಯಾರನ್ನೂ ಕೇಳಿಲ್ಲ. ನಾನು ಮತಗಟ್ಟೆಗಳ ಹೊರಗೆ ಸ್ಥಾಪಿಸಲಾದ ನಮ್ಮ ಬೂತ್‌ಗಳಿಗೆ ಭೇಟಿ ನೀಡುತ್ತಿದ್ದೆ ಅಷ್ಟೇ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!