Tuesday, August 16, 2022

Latest Posts

ಕೊರೋನಾ ವಿರುದ್ಧದ ಹೋರಾಟಕ್ಕೆ ಪಂಜಾಬ್ ಕಿಂಗ್ಸ್ ಸಾಥ್: ಆಕ್ಸಿಜನ್, ವೆಂಟಿಲೇಟರ್​ ಸೌಲಭ್ಯಕ್ಕಾಗಿ 70 ಲಕ್ಷ ರೂ. ದೇಣಿಗೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………….

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತದ ಕೋವಿಡ್​-19 ಹೋರಾಟಕ್ಕೆ ಐಪಿಎಲ್ ​ನ ಫ್ರಾಂಚೈಸಿಗಳಲ್ಲಿ ಒಂದಾದ ಪಂಜಾಬ್ ಕಿಂಗ್ಸ್ ಕೈ ಜೋಡಿಸಿದೆ.
ಕೋವಿಡ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲವನ್ನು ಒದಗಿಸುವ ಸಲುವಾಗಿ ರೌಂಡ್​ ಟೇಬಲ್ ಇಂಡಿಯಾ ಜೊತೆ ಕೈ ಜೋಡಿಸಿ ದೇಣಿಗೆ ಸಂಗ್ರಹ ನಿಧಿ ಅಭಿಯಾನ ಆರಂಭಿಸಿದೆ.
ಪಂಜಾಬ್ ಕಿಂಗ್ಸ್ ಆರ್​ಟಿಐ ಜೊತೆಗೆ ದೇಣಿಗೆ ಸಂಗ್ರಹ ಅಭಿಯಾನಕ್ಕೆ 70 ಲಕ್ಷ ರೂ. ದೇಣಿಗೆ ನೀಡಿದೆ. ಈ ಸಂಗ್ರಹ ನಿಧಿಯನ್ನು ವೈರಸ್ ಪೀಡಿತರಿಗೆ ವೈದ್ಯಕೀಯ ಸಂಪನ್ಮೂಲಗಳನ್ನು ಒದಗಿಸುವ ಆಶಯವನ್ನು ಹೊಂದಿದೆ.ಅಂದರೆ ಆಕ್ಸಿಜನ್ ಕಾನ್ಸೆಂಟ್ರೇಟರ್ಸ್, ಬೈಪಾಪ್ ಯಂತ್ರಗಳು ಮತ್ತು ವೆಂಟಿಲೇಟರ್‌ಗಳನ್ನು ಒದಗಿಸಿಕೊಡುವುದಕ್ಕೆ ಉಪಯೋಗಿಸಿಕೊಳ್ಳಲಾಗುತ್ತದೆ.
ಈ ವೈದ್ಯಕೀಯ ಸಂಪನ್ಮೂಲಗಳನ್ನು ಪ್ರತ್ಯೇಕ ಮನೆಗಳು, ದತ್ತಿ ವೈದ್ಯಕೀಯ ಸಂಸ್ಥೆಗಳು ಮತ್ತು ಇಲ್ಕ್‌ನಂತಹ ಹೆಚ್ಚು ಜನರಿಗೆ ಅನುಕೂಲವಾಗುವ ಸ್ಥಳಗಳಲ್ಲಿ ಬಳಸಲಾಗುತ್ತದೆ.ಈ ಹಣದಲ್ಲಿ ಒಂದು ಪೈಸಾ ಕೂಡ ವ್ಯರ್ಥವಾಗದಂತೆ ಬಳಸಿಕೊಳ್ಳುತ್ತೇವೆ ಎಂದು ರೌಂಡ್​ ಟೇಬಲ್ ಇಂಡಿಯಾ ಖಚಿತಪಡಿಸಿದೆ.
ಎಸ್​ಆರ್​ಹೆಚ್​ ಮಾಲೀಕ ಸಂಸ್ಥೆಯಾಗಿರುವ ಸನ್​ನೆಟ್​ವರ್ಕ್ 30 ಕೋಟಿ ರೂ ನೀಡಿದರೆ, ರಾಜಸ್ಥಾನ್ ರಾಯಲ್ಸ್ 7.5 ಕೋಟಿ ನೀಡಿತ್ತು. ಸಿಎಸ್​ಕೆ 450 ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನು ದೇಣಿಗೆಯಾಗಿ ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಕ್ಸಿಜನ್ ಮತ್ತು ಬೆಡ್ ವ್ಯವಸ್ಥೆಗಾಗಿ ದೇಣಿಗೆ ಸಂಗ್ರಹ ಅಭಿಯಾನ ನಡೆಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!