Thursday, October 6, 2022

Latest Posts

ಪಂಜಾಬ್ ಸ್ಪೀಕರ್ ಕುಲ್ತಾರ್ ಸಿಂಗ್, ಇಬ್ಬರು ಸಚಿವರ ಸಹಿತ ಒಂಭತ್ತು ಮಂದಿಗೆ ಜಾಮೀನು ರಹಿತ ವಾರಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಂಜಾಬ್ ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್, ಕ್ಯಾಬಿನೆಟ್ ಸಚಿವರಾದ ಗುರ್ಮೀತ್ ಸಿಂಗ್ ಮೀಟ್ ಹಯರ್, ಲಾಲ್ಜಿತ್ ಸಿಂಗ್ ಭುಲ್ಲರ್ ಸಹಿತ ಒಂಭತ್ತು ಮಂದಿ ವಿರುದ್ಧ ಪಂಜಾಬ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಅಮೃತಸರ ಮತ್ತು ತರ್ನ್ ತರಣ್‌ನಲ್ಲಿ ನಡೆದ ಹೂಚ್ ಸಾವುಗಳ ವಿರುದ್ಧ ಪ್ರತಿಭಟನೆ ಸಂದರ್ಭ 2020 ರ ಆಗಸ್ಟ್‌ನಲ್ಲಿ ಧರಣಿ ನಡೆಸಿದ ಪ್ರಕರಣ ಇದಾಗಿದ್ದು, ಅವರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ಎಎಪಿ ನಾಯಕರು ಮತ್ತು ಕಾರ್ಯಕರ್ತರು ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಂಜಾಬ್ ಸ್ಪೀಕರ್, ಇಬ್ಬರು ಸಚಿವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!