ಪಂಜಾಬಿ ಡಾಬಾ ಸ್ಟೈಲ್‌ ಬೆಂಡೇಕಾಯಿ ಮಸಾಲಾ ಟ್ರೈ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿ:

250 ಗ್ರಾಂ ಬೆಂಡೆಕಾಯಿ
5 ಚಮಚ ಎಣ್ಣೆ
1 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಸಾಸಿವೆ
1 ಕಪ್ ಈರುಳ್ಳಿ
1 ಕಪ್ ಟೊಮೆಟೊ ಪೇಸ್ಟ್ (ಎರಡು ಟೊಮೆಟೊಗಳು)
1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
1 ಟೀಸ್ಪೂನ್ ಜೀರಿಗೆ ಪುಡಿ
1 ಟೀಸ್ಪೂನ್ ಕೊತ್ತಂಬರಿ ಪುಡಿ
1/2 ಟೀಸ್ಪೂನ್ ಗರಂ ಮಸಾಲಾ
2 ಅರಿಶಿನ
1 ಟೀಸ್ಪೂನ್ ಅಚ್ಚ ಖಾರದಪುಡಿ, ಉಪ್ಪು

ಮಾಡುವ ವಿಧಾನ: 

ಒಂದು ಬಾಣಲೆಗೆ ಒಂದು ಟೀಸ್ಪೂನ್‌ ಎಣ್ಣೆ ಹಾಕಿ ತುಂಡರಿಸಿದ ಬೆಂಡೇಕಾಯಿ ಹೋಳುಗಳನ್ನು ಹಾಕಿ ಲೋಳೆ ಬಿಡುವವರೆಗೆ ಹುರಿಯಿರಿ. ಅದನ್ನು ಬೇರೆ ತಟ್ಟೆಗೆ ಹಾಕಿ ಅದೇ ಬಾಣಲೆಗೆ ನಾಲ್ಕು ಚಮಚ ಎಣ್ಣೆ ಹಾಕಿ ಸಾಸಿವೆ ಜೀರಿಗೆ ಹಾಕಿ ಚಿಟಪಟ ಸಿಡಿದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ ಹಾಗೂ ಹೆಚ್ಚಿದ ಈರುಳ್ಳಿ ಹಾಕಿ ಕೆಂಬಣ್ಣದವರಿಗೆ ಬಾಡಿಸಿ ಕರಿಬೇವಿನ ಎಲೆ ಸೇರಿಸಿ. ಈಗ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಗರಂಮಸಾಲಾ, ಅಚ್ಚ ಖಾರದಪುಡಿ, ಉಪ್ಪು, ಅರಿಶಿನ ಎಲ್ಲವನ್ನು ಸೇರಿಸಿ ಮಸಾಲೆ ಸುವಾಸನೆ ಬರುವವರೆಗೆ ಬೇಯಿಸಿ ಈಗ ಅದಕ್ಕೆ ನುಣ್ಣಗೆ ರುಬ್ಬಿಕೊಂಡ ಟೊಮ್ಯಾಟೋ ಪೇಸ್ಟ್‌ ಹಾಕಿ ಎಣ್ಣೆ ತೇಲುವವರೆಗೆ ಕುದಿಸಿ. ಟೊಮ್ಯಾಟೊ ಹಸಿ ವಾಸನೆ ಹೋದ ಬಳಿಕ ಹುರಿದ ಬೆಂಡೇಕಾಯಿ ಹೋಳು ಹಾಕಿ ಐದು ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಡಾಬಾ ಶೈಲಿಯ ಬೆಂಡೆ ಮಸಾಲಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!