Tuesday, August 16, 2022

Latest Posts

ಕೋವಿಡ್ ಲಸಿಕೆ ಪಡೆಯಲು ಜನರಿಂದ ನೂಕು ನುಗ್ಗಲು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………

ಹೊಸದಿಗಂತ ವರದಿ, ಅಂಕೋಲಾ:

ಕೋವಿಡ್ ಲಸಿಕೆ ಪಡೆಯಲು ಜನರು ನೂಕು ನುಗ್ಗಲು ನಡೆಸಿದ ಘಟನೆ ಇಲ್ಲಿನ ಸ್ವಾತಂತ್ರ್ಯ ಸಂಗ್ರಾಮ ಭವನದ ಲಸಿಕಾ ಕೇಂದ್ರದಲ್ಲಿ ಸೋಮವಾರ ನಡೆದಿದ್ದು ಪೊಲೀಸರು ಮದ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದಾರೆ.
ಬೆಳಿಗ್ಗೆ ಲಸಿಕಾ ಕೇಂದ್ರದಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಜಮಾಯಿಸಿದ್ದರು ಆದರೆ ಕೇವಲ 200 ರಷ್ಟು ಮಾತ್ರ ಲಸಿಕೆ ಲಭ್ಯತೆ ಇರುವುದರಿಂದ ಯಾದಿ ತಯಾರಿಸಿರುವುದು ಜನರ ಗದ್ದಲಕ್ಕೆ ಕಾರಣವಾಯಿತು.
ಮೊದಲ ಲಸಿಕೆ ಪಡೆದು 90 ದಿನಗಳು ಕಳೆದರೂ ಎರಡನೇ ಡೋಸ್ ಸಿಗುತ್ತಿಲ್ಲ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು ಇನ್ನೂ ಕೆಲವರು ತಮಗೆ ಲಸಿಕೆ ನೀಡುವಂತೆ ಸಿಬ್ಬಂದಿಗಳಿಗೆ ಒತ್ತಾಯಿಸುತ್ತಿರುವುದು ಗೊಂದಲದ
ವಾತಾವರಣಕ್ಕೆ ಕಾರಣವಾಯಿತು.
ಪೊಲೀಸ್ ಸಿಬ್ಬಂದಿಗಳು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರೂ ಜನರ ಆಕ್ರೋಶ ಮುಂದುವರಿದ ಕಾರಣ ಪಿ.ಎಸ್. ಐ ಪ್ರವಿಣಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಸಮಾಧಾನ ಪಡಿಸುವ ಮೂಲಕ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss