Saturday, July 2, 2022

Latest Posts

ಫೆಬ್ರವರಿಯಲ್ಲಿ ಶುರುವಾಗಲಿದ್ಯಂತೆ ಪುಷ್ಪ-2 ಸಿನಿಮಾದ ಶೂಟಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈಗಾಗಲೇ ಬಾಕ್ಸ್‌ ಆಫೀಸ್‌ ಹಿಟ್‌ ಆಗಿರುವ ಪುಷ್ಪ ಈಗ ಮತ್ತೊಂದು ಪಾರ್ಟ್‌ ಗೆ ಸಜ್ಜಾಗುತ್ತಿದೆ.
ಈ ಬಗ್ಗೆ ನಿರ್ದೇಶಕ ಸುಕುಮಾರ್ ಮಾತನಾಡಿದ್ದು, ಪುಷ್ಪ ಚಿತ್ರಕ್ಕೆ ಎಲ್ಲೆಡೆ ಹೆಚ್ಚು ಜನಪ್ರೀಯತೆ ಕಂಡುಬಂದಿದೆ. ಈ ಚಿತ್ರ ವರ್ಷದ ಅತಿ ಹೆಚ್ಚು ಗಳಿಕೆ ಪಡೆದ ಸಿನಿಮಾಗಳಲ್ಲಿ ಒಂದಾಗಿದೆ.
ಹಾಲಿವುಡ್‌ ನ ಸ್ಪೈಡರ್‌ ಮ್ಯಾನ್‌, ನೋ ವೇ ಹೋಂ ನಂತಹ ಚಿತ್ರಗಳ ನಡುವೆ ಪುಷ್ಪ ಸೂಪರ್‌ ಹಿಟ್‌ ಆಗಿದೆ. ಇನ್ನೂ ಚಿತ್ರದ ಮತ್ತೊಂದು ಭಾಗ ಫೆಬ್ರವರಿಯಲ್ಲಿ ಶೂಟಿಂಗ್‌ ಪ್ರಾತಂಭವಾಗಲಿದೆ ಎಂದಿದ್ದಾರೆ.

Dhananjay in Allu Arjun's 'Pushpa' | The News Minuteಪುಷ್ಪದ ರಿಲೀಸ್‌ ನಂತರ ನಾನು ತುಂಬಾ ಚಾರ್ಜ್‌ ಆಗಿದ್ದೇನೆ. ಚಿತ್ರದ ಪಾರ್ಟ್‌ 2 ಶೂಟಿಂಗ್‌ ಗೆ ಉತ್ಸುಕನಿದ್ದೇನೆ ಎಂದು ನಟ ಅಲ್ಲು ಅರ್ಜುನ್‌ ಸಂತಸ ಹಂಚಿಕೊಂಡಿದ್ದಾರೆ. ಇದೇ ವೇಳೆ ಡಾಲಿ ಧನಂಜಯ ಅವರ ಬೇಡಿಕೆ ಕೂಡ ಹೆಚ್ಚಾಗಿದ್ದು, ಪುಷ್ಪ 2ರಲ್ಲೂ ಅವರಿಗೆ ಹೆಚ್ಚಿನ ಹೊರೆ ಇರಲಿದೆ ಎಂದು ಸುಕುಮಾರ್‌ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss