ಆನ್ ಲೈನ್ ಬೆಟ್ಟಿಂಗ್ ಜಾಹೀರಾತುಗಳಿಗೆ ಬ್ರೇಕ್ ಹಾಕಿ: ಟಿವಿ ಚಾನೆಲ್, ಡಿಜಿಟಲ್ ಮಾಧ್ಯಮಗಳಿಗೆ ಸರ್ಕಾರದ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆನ್‌ ಲೈನ್ ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ ಗಳಲ್ಲಿ ಬರುವ ಜಾಹೀರಾತುಗಳನ್ನು ತಡೆಯುವಂತೆ ಡಿಜಿಟಲ್ ಸುದ್ದಿ ಪ್ರಕಾಶಕರು ಮತ್ತು ಖಾಸಗಿ ಟಿವಿ ಚಾನೆಲ್‌ ಗಳಿಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ(MIB) ಸೋಮವಾರ ಸಲಹೆ ನೀಡಿದೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು 2021 ರ ಪ್ರಕಾರ, ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ ಗಳ ಜಾಹೀರಾತು ಕಾನೂನುಬಾಹಿರ ಚಟುವಟಿಕೆಯಾಗಿರುವುದರಿಂದ ಡಿಜಿಟಲ್ ಮಾಧ್ಯಮದಲ್ಲಿ ತೋರಿಸಬಾರದು ಎಂದು ಹೇಳಲಾಗಿದೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳು, ಸುದ್ದಿ ವೆಬ್‌ಸೈಟ್‌ಗಳು ಮತ್ತು ಖಾಸಗಿ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರವು ಸಲಹೆ ನೀಡಿದ್ದು, ಆನ್‌ ಲೈನ್ ಬೆಟ್ಟಿಂಗ್ ಪ್ಲಾಟ್‌ ಫಾರ್ಮ್‌ಗಳ ಜಾಹೀರಾತುಗಳನ್ನು ಪ್ರಕಟಿಸುವುದನ್ನು ತಡೆಯುವಂತೆ ತಿಳಿಸಿದೆ.

ಜಾಹೀರಾತುಗಳನ್ನು ಭಾರತೀಯ ಪ್ರೇಕ್ಷಕರಿಗೆ ಗುರಿಪಡಿಸದಂತೆ ಆನ್‌ ಲೈನ್ ಜಾಹೀರಾತು ಮಧ್ಯವರ್ತಿಗಳಿಗೆ ಸೂಚಿಸಲಾಗಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಬೆಟ್ಟಿಂಗ್ ಮತ್ತು ಜೂಜಾಟ ನಿಷೇಧಿಸಲಾಗಿದೆ. ಗ್ರಾಹಕರಿಗೆ, ವಿಶೇಷವಾಗಿ ಯುವಕರು ಮತ್ತು ಮಕ್ಕಳಿಗೆ ಗಮನಾರ್ಹ ಆರ್ಥಿಕ ಮತ್ತು ಸಾಮಾಜಿಕ-ಆರ್ಥಿಕ ಅಪಾಯವನ್ನುಂಟುಮಾಡುವುದರಿಂದ ಇದಕ್ಕೆ ತಡೆ ಹಾಕಬೇಕೆಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!