ಹೊಸದಿಗಂತ ವರದಿ ಗಂಗಾವತಿ:
ಭಕ್ತಿಗೆ ವಯಸ್ಸಿನ ಅಂತರ ಬೇಕಾಗಿಲ್ಲ ಎಂಬುದಕ್ಕೆ ಹನುಮ ಮಾಲೆ ಧರಿಸಿದ ಪುಟಾಣಿಗಳೇ ಸಾಕ್ಷಿ.
ಅಂಜನಾದ್ರಿ ಯಲ್ಲಿ ಮಧ್ಯ ವಯಸ್ಕರು, ವೃದ್ಧರು ಮಾತ್ರ ಹನುಮ ಮಾಲೆ ಧರಿಸಿ ಬಂದಿರಲಿಲ್ಲ. ಪುಟಾಣಿ ಮಕ್ಕಳು ಕೂಡ ಹನುಮ ಮಾಲೆ ಧರಿಸಿರುವ ದೃಶ್ಯ ಕಂಡು ಬಂದಿತು.
ಹನುಮ ಮಾಲೆ ಧರಿಸಿದ ಮಕ್ಕಳು 575 ಮೆಟ್ಟಿಲನ್ನು ಬರಿಗಾಲಲ್ಲಿ ಏರಿ ಆಂಜನೇಯಸ್ವಾಮಿ ದರ್ಶನ ಪಡೆದಿರುವುದು ವಿಶೇಷ ವಾಗಿತ್ತು. ಕೆಲ ಮಾಲಾಧಾರಿ ಮಕ್ಕಳನ್ನು ಪೋಷಕರು ಹೆಗಲಮೇಲೆ ಕೂರಿಸಿಕೊಂಡು ಹೊತ್ತುಕೊಂಡು ಹೋಗುವ ದೃಶ್ಯ ಕಂಡುಬಂದಿರು.