ಉಕ್ರೇನ್ ಮೇಲೆ ಸಾರಿರುವ ಯುದ್ಧ ನಿಲ್ಲಿಸಲು ಪುಟಿನ್ ಚಿಂತನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಕ್ರೇನ್ ವಿರುದ್ಧ ತನ್ನ ದಾಳಿಯನ್ನು ನಿಲ್ಲಿಸುವ ಬಗ್ಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆಸಕ್ತಿ ತೋರಿದ್ದು, ‘ದಿ ಸೂನರ್, ದಿ ಬೆಟರ್’ ಎಂದು ಹೇಳಿದ್ದಾರೆ.
ಉಕ್ರೇನ್ ಮಾತನಾಡಲು ನಿರಾಕರಿಸುತ್ತಿದೆ ಎಂದು ರಷ್ಯಾ ಹೇಳುತ್ತಿದೆ, ಇತ್ತ ಉಕ್ರೇನ್ ರಷ್ಯಾ ವಶಪಡಿಸಿಕೊಂಡ ನಮ್ಮ ಪ್ರದೇಶವನ್ನು ಬಿಟ್ಟುಕೊಡಬೇಕು ಎಂದು ಉಕ್ರೇನ್ ಹೇಳುತ್ತಿದೆ.

ಯುದ್ಧವನ್ನು ನಿಲ್ಲಿಸಲು ರಷ್ಯಾ ಒಲವು ತೋರಿದ್ದು, ರಾಜತಾಂತ್ರಿಕ ಮಾತುಕತೆಯೊಂದಿಗೆ ಯುದ್ಧಕ್ಕೆ ಕೊನೆ ಹಾಡಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪುಟಿನ್ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ಭೇಟಿ ಮಾಡಿದ ಒಂದು ದಿನದ ನಂತರ ಪುಟಿನ್ ಯುದ್ಧಕ್ಕೆ ಕೊನೆ ಬಯಸಿದ್ದಾರೆ.

ನಾವು ಈಗಲೂ ಹೇಳುತ್ತೇವೆ, ಹಿಂದೆಯೂ ಇದನ್ನೇ ಹೇಳಿದ್ದೆವು, ಯುದ್ಧದ ತೀವ್ರತೆ ನ್ಯಾಯಸಮ್ಮತವಲ್ಲದ ನಷ್ಟಗಳಿಗೆ ಕಾರಣವಾಗುತ್ತದೆ. ಮಾತುಕತೆಗೆ ನಾವು ಸದಾ ಮುಕ್ತ ಎಂದಿದ್ದಾರೆ.

ಎಲ್ಲಾ ಸಶಸ್ತ್ರ ಸಂಘರ್ಷಗಳು ರಾಜತಾಂತ್ರಿಕ ಹಾದಿಯಲ್ಲಿ ಕೆಲವು ರೀತಿಯ ಮಾತುಕತೆಗಳೊಂದಿಗೆ ಒಂದು ರೀತಿ ಅಥವಾ ಇನ್ನೊಂದು ರೀತಿಯಲ್ಲಿ ಕೊನೆಗೊಳ್ಳುತ್ತವೆ ಎಂದು ಪುಟಿನ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!