ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೊನ್ನೆಯಷ್ಟೇ ಕನ್ನಡವನ್ನು ಅತ್ಯಂತ ಕೊಳಕು ಭಾಷೆ ಅಂದಿತ್ತು ಗೂಗಲ್. ಬಳಿಕ ಅಮೇಜಾನ್ ಕರ್ನಾಟ ಧ್ವಜವನ್ನು ಮಹಿಳೆಯರ ಒಳ ಉಡುಪಿಗೆ ಹಾಕಿ ಅದನ್ನ ಮಾರಲು ಹೋಗಿ ಅವಮಾನ ಮಾಡಿದ್ರು.ಇದೀಗ ಇನ್ಸ್ಟಾಗ್ರಾಮ್ ಕಿರಿಕ್ ಮಾಡಿಕೊಂಡಿದೆ.
ಇನ್ಸ್ಟಾಗ್ರಾಮ್ನ ಸ್ಟಿಕರ್ಸ್/ ಗಿಫ್ ಆಪ್ಷನ್ನಲ್ಲಿ,ಶಿವ ಅಂತ ಟೈಪ್ ಮಾಡಿದ್ರೆ, ಆ ಸ್ಟಿಕರ್ನಲ್ಲಿ ಶಿವ ತನ್ನ ಕೈಯಲ್ಲಿ ವೈನ್ ಗ್ಲಾಸ್ ಹಿಡಿದಿರೋ ಒಂದು ಫೋಟೋ ಬರ್ತಿತ್ತು. ಇದು ಹಿಂದು ಧರ್ಮಕ್ಕೆ ಅವಮಾನ ಮಾಡಿದೆ ಅಂತ ಬಿಜೆಪಿ ಕಾರ್ಯಕರ್ತ ಮನೀಶ್ ಎಂಬುವವರು ಮಂಗಳವಾರದಂದು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಇನ್ಸ್ಟಾಗ್ರಾಮ್ ಸಿಇಓ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಇನ್ಸ್ಟಾಗ್ರಾಂ, ಮಹದೇವನ ಕೈಯಲ್ಲಿ ವೈನ್ ಗ್ಲಾಸ್ ಹಿಡಿದುಕೊಂಡಿದ್ದ ಸ್ಟಿಕರ್ನ್ನ ಕೂಡಲೇ ರಿಮೂವ್ ಮಾಡಿದೆ.