ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಐಒಸಿಯ ‘ಬಿಲೀವ್ ಇನ್ ಸ್ಪೋರ್ಟ್ಸ್’ ಅಭಿಯಾನಕ್ಕೆ ರಾಯಭಾರಿಯಾಗಿ ಪಿವಿ ಸಿಂಧು ಆಯ್ಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ವಿಶ್ವ ಚಾಂಪಿಯನ್ ಹಾಗೂ ಒಲಿoಪಿಕ್ಸ್ ನಲ್ಲಿ ರಜತ ಪದಕ ವಿಜೇತೆ ಪಿ.ವಿ ಸಿಂಧು ಹಾಗೂ ವಿಶ್ವದ ನಂ.11 ಕೆನಡಾದ ಮಿಚೆಲ್ ಲಿ ಅವರನ್ನು ಅಂತಾರಾಷ್ಟ್ರೀಯ ಒಲಂಪಿಕ್ ಸಮಿತಿಯ ಬಿಲೀವ್ ಇನ್ ಸ್ಪೋರ್ಟ್ಸ್ ಅಭಿಯಾನದ ಅಥ್ಲೀಟ್ ರಾಯಭಾರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಬ್ಯಾಡ್ಮಿಂಟನ್ ವಿಶ್ವ ಫೆಡರೇಷನ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದು, ಬಿಡಬ್ಲ್ಯುಎಫ್ ನ ‘ಐ ಆಮ್ ಬ್ಯಾಡ್ಮಿಂಟನ್’ ಎಂಬ ಅಭಿಯಾನಕ್ಕೆ ಈ ಇಬ್ಬರೂ ಕಳೆದ ಏಪ್ರಿಲ್ ನಿಂದ ಜಾಗತಿಕ ರಾಯಭಾರಿಗಳಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪಿ.ವಿ ಸಿಂಧು , ಐಒಸಿಯಿಂದ ರಾಯಭಾರಿಗಳಾಗಿ ನಾಮನಿರ್ದೇಶನಗೊಂಡಿರುವುದು ಹೆಮ್ಮೆಯ ವಿಷಯ, ಸ್ಪರ್ಧೆಯಲ್ಲಿ ಮೋಸ ಅಥವಾ ನಕಾರಾತ್ಮಕ ತಂತ್ರಗಳನ್ನು ಅನುಸರಿಸುವುದರ ವಿರುದ್ಧ ನಾನು ನನ್ನ ಸಹ ಅಥ್ಲೀಟ್ ಗಳ ಜೊತೆಗೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.
ಸಿಂಧು ರಾಯಭಾರಿಯಾಗಿ ಆಯ್ಕೆಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಘಾನಿಯ ‘ಬ್ಯಾಡ್ಮಿಂಟನ್ ಕ್ರೀಡೆಯೆಡೆಗೆ ಸಿಂಧು ಅವರಿಗೆ ಇರುವ ಬದ್ಧತೆ, ಪ್ರಾಮಾಣಿಕತೆಯನ್ನು ಗುರುತಿಸಲಾಗಿದೆ’ಎಂದು ಹೇಳಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss