ಹೊಸದಿಗಂತ ಆನ್ ಲೈನ್ ಡೆಸ್ಕ್:
ಇತ್ತೀಚೆಗೆ ರಾಘವೇಂದ್ರ ರಾಜ್ಕುಮಾರ್ ಅಭಿನಯದ ‘ರಾಜತಂತ್ರ’ ಚಿತ್ರವನ್ನು ನಿರ್ದೇಶಿಸಿದ್ದ ಪಿ.ವಿ.ಎರ್. ಸ್ವಾಮಿ ಇದೀಗ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ‘ವಿಶ್ವೇಶ್ವರ ಪಿಕ್ಚರ್ಸ್’ ಬ್ಯಾನರ್ನಲ್ಲಿ ಜ್ಞಾನೇಶ್ವರ ಐತಾಳ್ ನಿರ್ಮಿಸುತ್ತಿರುವ ‘ಬ್ಲ್ಯಾಕ್ ಡೈಮಂಡ್’ ಚಿತ್ರದ ಚಿತ್ರೀಕರಣವು ಏಪ್ರಿಲ್ನಲ್ಲಿ ಆರಂಭವಾಗಲಿದ್ದು ಪಿ.ವಿ.ಎರ್. ಸ್ವಾಮಿ ಅವರು ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ಕಥೆ, ಚಿತ್ರಕಥೆ ಮತ್ತು ಛಾಯಾಗ್ರಹಣ ಕೂಡಾ ಅವರದೇ ಆಗಿದೆ. ಪ್ರೇಮಕಥೆ ಆಧಾರಿತ ಈ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಕಾರ್ತಿಕ್, ವಿಷ್ಣು, ಪ್ರತಾಪ್ ಸಿಂಹ ಮುಂತಾದವರು ಅಭಿನಯಿಸಲಿದ್ದಾರೆ