spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ಯಾರಾಲಿಂಪಿಕ್ಸ್ ಪದಕವೀರ ಕನ್ನಡಿಗ ಸುಹಾಸರ ಬಗ್ಗೆ ತಿಳಿದಿರಲೇಬೇಕಾದ ಸ್ಫೂರ್ತಿಯುತ ಸಂಗತಿಗಳು

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

2021ರ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪಾಲಿಗೆ ದಾಖಲೆ ಮಟ್ಟದಲ್ಲಿ ಪದಕವೀರರ ಸಾಲೇ ಇದೆ. ಒಬ್ಬೊಬ್ಬರದೂ ಜನಮಾನಸದಲ್ಲಿ ಸ್ಫೂರ್ತಿ ಬಿತ್ತುವ ಯಶೋಗಾಥೆಯೇ.

ಈ ಪೈಕಿ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇಡೀ ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದು ಕನ್ನಡಿಗ ಸುಹಾಸ್ ಯತಿರಾಜ್.

38 ವರ್ಷದ ತರುಣ ಸುಹಾಸ್ ಜೀವನಗಾಥೆ ನಮ್ಮಲ್ಲಿ ಅಚ್ಚರಿಯನ್ನೇ ಹುಟ್ಟುಹಾಕುತ್ತದೆ. ಪದಕದ ಸಾಧನೆ ಒಂದೆಡೆಯಾದರೆ, ಅವರು ಸಾಲುಸಾಲಾಗಿ ಜೀವನದ ಸಮರಗಳನ್ನು ಗೆಲ್ಲುತ್ತ ಬಂದಿರುವ ಪರಿ ಎಂಥವರಲ್ಲೂ ಬದುಕಿನ ಬಗ್ಗೆ ಹೊಸನೋಟವನ್ನು ಚಿಮ್ಮಿಸುವಂತಿದೆ.

ಸುಹಾಸ್ ಪ್ಯಾರಾಲಿಂಪಿಕ್ಸ್ ಪದಕವೀರರಷ್ಟೇ ಅಲ್ಲ. ಎಂಜಿನಿಯರಿಂಗ್ ಪದವೀಧರ. ಒಬ್ಬ ದಕ್ಷ ಐಎಎಸ್ ಅಧಿಕಾರಿ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಗಮನಸೆಳೆಯುವಂತೆ ಕರ್ತವ್ಯ ನಿರ್ವಹಿಸಿದ ಅಧಿಕಾರಿ. ಅಂಥ ಕೆಲಸದೊತ್ತಡದ ನಡುವೆಯೇ ಆಟದ ಅಭ್ಯಾಸವನ್ನೂ ಮಾಡಿಕೊಂಡು ಈಗ ಬೆಳ್ಳಿ ಪದಕ ತಂದಿದ್ದಾರೆ. ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಯಶ್ ಭಾರ್ತಿ’ ಪ್ರಶಸ್ತಿಯನ್ನೂ ಪಡೆದವರಿವರು.

ಸುಹಾಸ್ ಉತ್ತರಪ್ರದೇಶದ ಐಎಎಸ್ ಅಧಿಕಾರಿಯಾಗಿದ್ದು, ಗೌತಮ ಬುದ್ಧ ನಗರದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ಐಎಎಸ್ ಅಧಿಕಾರಿ ಸುಹಾಸ್. ಕೋವಿಡ್ ಸಾಂಕ್ರಾಮಿಕ ಹೊತ್ತಿನಲ್ಲಿ ನೋಯ್ಡಾ ಜಿಲ್ಲೆ ಹಾಟ್ ಸ್ಪಾಟ್ ಆಗಿತ್ತು. ಈ ವೇಳೆ ಇಡೀ ಜಿಲ್ಲೆಯನ್ನು ಹಾಗೂ ಗಡಿಯನ್ನು ಕೋವಿಡ್ ನಿಂದ ನಿಯಂತ್ರಿಸುವಲ್ಲಿ ಸುಹಾಸ್ ಯಶಸ್ವಿಯಾಗಿದ್ದಾರೆ.

ಕರ್ನಾಟಕದ ನಂಟು: ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಸುಹಾಸ್, ಸುರತ್ಕಲ್ ನ NITKಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸುಹಾಸ್ ಕಾಲು ದುರ್ಬಲತೆ ಹೊಂದಿಯೂ ಐಎಎಸ್ ಪರೀಕ್ಷೆ ಪಾಸು ಮಾಡಿ ಅಧಿಕಾರಿಯಾದವರಲ್ಲಿ ಮೊದಲಿಗರು.

ಬ್ಯಾಡ್ಮಿಂಟನ್ ಹೇಗೆ?:  ಸುಹಾಸ್ ಬಾಲ್ಯದಿಂದಲೂ ಕ್ರೀಡೆಯನ್ನು ಪ್ರೀತಿಸುತ್ತಿದ್ದರು. ಅಜಂಘಡದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬ್ಯಾಡ್ಮಿಂಟನ್ ಅಭ್ಯಾಸ ಮಾಡಲಾರಂಭಿಸಿದರು. ಈಗಿನ ಪ್ಯಾರಾಲಿಂಪಿಕ್ಸ್ ನ ಕೋಚ್ ಆಗಿರುವ ಗೌರವ್ ಖನ್ನಾ ಅವರು ಸುಹಾಸ್ ಅವರ ದಕ್ಷತೆ ಹಾಗೂ ಬ್ಯಾಡ್ಮಿಂಟನ್ ನಲ್ಲಿ ಸಾಧನೆ ಮಾಡುವ ಕನಸನ್ನು ನನಸು ಮಾಡಿಕೊಳ್ಳಲು ಹುರಿದುಂಬಿಸಿದರು. ಸುಹಾಸ್ ಅವರ ಸತತ ಪ್ರಯತ್ನ ಹಾಗೂ ಪರಿಶ್ರಮವೇ ಅವರ ಇಂದಿನ ಸಾಧನೆಗೆ ಕಾರಣವಾಗಿದೆ ಎಂದರೆ ಸುಳ್ಳಾಗಲಾರದು.

ಪ್ರಾಕ್ಟೀಸ್ ಹೇಗೆ?:  ಜಿಲ್ಲಾಧಿಕಾರಿಯಾಗಿ ಇಡೀ ದಿನ ಸೇವಿಸಲ್ಲಿಸುತ್ತಿದ್ದ ಸುಹಾಸ್, ಕೋವಿಡ್ ಕಾಲದಲ್ಲಿ ತಮ್ಮ ಸುದೀರ್ಘ ಕೆಲಸದ ನಡುವೆ ಪ್ರ್ಯಾಕ್ಟೀಸ್ ಅನ್ನು ಎಂದೂ ಮರೆತಿಲ್ಲ. ಪ್ರತಿದಿನ ರಾತ್ರಿ 09-10ಗಂಟೆಗೆ ಕಚೇರಿಯಿಂದ ಬಂದ ನಂತರ ಬ್ಯಾಡ್ಮಿಂಟನ್ ಅಭ್ಯಾಸ ಮಾಡಿದ್ದಾರೆ.

ಈ ಬಗ್ಗೆ ಪತ್ನಿ ರೀತು ಕೂಡ ಸಂತಸ ಹಂಚಿಕೊಂಡಿದ್ದು, ಜಿಲ್ಲಾಧಿಕಾರಿಯಾಗಿ ಹಗಲೆಲ್ಲಾ ಶ್ರಮಿಸಿದರೂ ಎಂದೂ ಕೂಡ ತಮ್ಮ ಬ್ಯಾಡ್ಮಿಂಟನ್ ಅಭ್ಯಾಸದಿಂದ ಹಿಂದೆ ಸರಿದವರಲ್ಲ ಎಂದಿದ್ದಾರೆ.

ಸಾಧನೆ:·

  •  2016ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗಳಿಸಿಕೊಟ್ಟು ದಾಖಲೆ ಬರೆದರು ಸುಹಾಸ್.
  • 2017 ರಲ್ಲಿ ಟರ್ಕಿಯಲ್ಲಿ ನಡೆದ ಬಿಡಬ್ಲ್ಯುಎಫ್ ಟರ್ಕಿಶ್ ಓಪನ್ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ಚಿನ್ನದ ಪದಕ
  • 2018 ರ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದರು.
  • 2021ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ ನ ಸಿಂಗಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ.
  • ಕ್ರೀಡೆಗಳನ್ನು ಹೊರತುಪಡಿಸಿ, ಸುಹಾಸ್ ಅವರಿಗೆ 2016 ರಲ್ಲಿ ಉತ್ತರ ಪ್ರದೇಶದ ಅತ್ಯುನ್ನತ ನಾಗರಿಕ ಗೌರವವಾದ ‘ಯಶ್ ಭಾರ್ತಿ’ಯನ್ನು ನೀಡಲಾಯಿತು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss