ಬಾಲಾಶ್ರಮದಲ್ಲಿ ಸ್ವಾತಂತ್ರ್ಯ ಕಲಿಗಳ ಸಹಚರ್ಯ ಪ್ಯಾರೆಲಾಲ್ ರ ಬದುಕನ್ನು ಬದಲಿಸಿತ್ತು..

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪ್ಯಾರೆ ಲಾಲ್ ಯಾದವ್ ಅವರು 26 ಜನವರಿ 1906 ರಂದು ದುರ್ಗದ ಕುರ್ಮಿ ​​ಗುದ್ರಾದಲ್ಲಿ ಜನಿಸಿದರು.  ವಿದ್ಯಾಭ್ಯಾಸದ ಕಡೆಗೆ ಪುತ್ರನ ಒಲವನ್ನು ನೋಡಿದ ತಂದೆ ದುರ್ಗಾಲಾಲ್ ಯಾದವ್ ಅವರು ಪ್ಯಾರೆ ಲಾಲ್‌ ಅವರನ್ನು ರಾಯ್‌ಪುರದ ಬಾಲಾಶ್ರಮಕ್ಕೆ ಓದಲು ಸೇರಿಸಿದರು.
ಈ ಸಂಸ್ಥೆಯು ಈಗಾಗಲೇ ರಾಯ್‌ಪುರದಲ್ಲಿ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ತಾಣವಾಗಿ ಪ್ರಖ್ಯಾವಾಗಿತ್ತು. ಇಲ್ಲಿ ಪಂಡಿತ್ ರವಿಶಂಕರ್ ಶುಕ್ಲಾ, ಮಹಂತ್ ಲಕ್ಷ್ಮೀನಾರಾಯಣ ದಾಸ್, ಪ್ಯಾರೇಲಾಲ್ ಸಿಂಗ್ ಮೊದಲಾದ ಸ್ವಾತಂತ್ರ್ಯ ಕಲಿಗಳ ಸಂಪರ್ಕಕ್ಕೆ ಪ್ಯಾರೆ ಲಾಲ್ ಬಂದರು ಮತ್ತು ಆ ನಾಯಕರ ಭಾಷಣಗಳು ಅವರಲ್ಲಿನ ದೇಶಭಕ್ತಿಯನ್ನು ಉದ್ದೀಪನಗೊಳಿಸಿದವು.  ಅಧ್ಯಯನದ ವೇಳೆಯಲ್ಲಿ ಪ್ಯಾರೆಲಾಲ್ ದೇಶಭಕ್ತಿಯ ಕಾರ್ಯಕರ್ತ ಎಂದು ಪ್ರಸಿದ್ಧರಾದರು. 1930 ರಲ್ಲಿ, ಅವರು ನಾಗರಿಕ ಅಸಹಕಾರ ಚಳವಳಿಯ ಮೊದಲ ಹಂತದಲ್ಲಿ ನಾಯಕರಿಗೆ ಸಹಾಯಕರಾಗಿ ಕೆಲಸ ಮಾಡಿದರು. ನಾಗರಿಕ ಅಸಹಕಾರ ಚಳವಳಿಯ ಎರಡನೇ ಹಂತದಲ್ಲಿ, 1932ರ ಏಪ್ರಿಲ್ 6 ರಿಂದ ಏಪ್ರಿಲ್ 12ರವರೆಗೆ  ದುರ್ಗ್ ಜಿಲ್ಲೆಯಲ್ಲಿ ಬ್ರಟಿಷ್ ‌ವಿರೋಧಿ ಕರಪತ್ರಗಳನ್ನು ಹಂಚುವ ಮೂಲಕ ಚಳುವಳಿಯ ಮಾಹಿತಿಯನ್ನು ಹಳ್ಳಿಯಿಂದ ಹಳ್ಳಿಗೆ ರವಾನಿಸಿದರು. ಈ ಪತ್ರಗಳಲ್ಲಿ ಬಲಿದಾನ ಸಪ್ತಾಹ ಆಚರಿಸುವ ಬಗ್ಗೆ ಹಾಗೂ ಪಿಕೆಟಿಂಗ್ ನಡೆಸುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಕೋಟೆಯೊಂದರಲ್ಲಿ ಪಿಕೆಟಿಂಗ್ ನಡೆಸುತ್ತಿದ್ದಾಗ ಪ್ಯಾರೇಲಾಲ್ ಅವರನ್ನು ಬಂಧಿಸಲಾಯಿತು. ಈ ಅಪರಾಧಕ್ಕಾಗಿ 6 ​​ತಿಂಗಳ ಜೈಲು ಶಿಕ್ಷೆ ಮತ್ತು 25 ರೂ. ದಂದ ವಿಧಿಸಲಾಗಿತ್ತು. ದಂಡ ಕಟ್ಟಲು ವಿಫಲವಾದ ಕಾರಣ ಅವರು 1 ತಿಂಗಳು 15 ದಿನಗಳ ಹೆಚ್ಚಿನ ಶಿಕ್ಷೆಗೆ ಒಳಗಾಗಬೇಕಾಯಿತು. ಅವರು ಈ ಶಿಕ್ಷೆಯನ್ನು ರಾಯಪುರ ಮತ್ತು ಅಮರಾವತಿ ಜೈಲಿನಲ್ಲಿ ಪೂರ್ಣಗೊಳಿಸಿದರು. ಅವರು 28 ಡಿಸೆಂಬರ್ 1987 ರಂದು ನಿಧನರಾದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!