ಹೊಸದಿಗಂತ ಡಿಜಿಟಲ್ ಡೆಸ್ಕ್:
20 ಕೋಟಿ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಫೈಥೋಸಾರಸ್ನ ಬೃಹದಾಕಾರದ ಪಳೆಯುಳಿಕೆ ಮಧ್ಯಪ್ರದೇಶದ ಟಿಕಿ ಫಾರ್ಮೇಷನ್ನಲ್ಲಿ ಪತ್ತೆಯಾಗಿದೆ.
ಮೊಸಳೆಯ ಪ್ರಾಚೀನ ಪ್ರಭೇದ ಇದಾಗಿದ್ದು, ಫೈಥೋಸಾರಸ್ ಹಾಗೂ ಮೊಸಳೆಗಳ ಪೂರ್ವಿಕ ಪ್ರಾಣಿ ಒಂದೇ ಆಗಿದೆ. ಪೈಥೋಸಾರಸ್ ಈ ಕುಟುಂಬದ ಅತ್ಯಂತ ಹಳೆಯ ಜೀವಿಯಾಗಿದೆ.
ಟೆಕಿ ಫಾರ್ಮೇಷನ್ ಪತ್ತೆಹಚ್ಚಿದ ಫೈಥೋಸಾರಸ್ ಪಳೆಯುಳಿಕೆ 8.4 ಮೀಟರ್ನಷ್ಟು ಉದ್ದವಿದೆ. ಇದು ಜಗತ್ತಿನ ಅತಿ ಉದ್ದದ ಪಳೆಯುಳಿಕೆಯಲ್ಲಿ ಒಂದಾಗಿದೆ.
ಮೊಸಳೆಯ ಜಾತಿಗೆ ಸೇರಿದ ಬಹುತೇಕ ಜೀವಿಗಳು ನೋಡಲು ಮೊಸಳೆಯನ್ನು ಹೋಲುವುದಿಲ್ಲ. ಆದರೆ ಫೈಥೋಸಾರಸ್ ಮಾತ್ರ ಮೊಸಳೆಯನ್ನು ಹೋಲುತ್ತದೆ. ಕುಳ್ಳ ಕಾಲುಗಳು, ಅಗಲ ಹಾಗೂ ಭಾರವಾದ ದೇಹ, ಉದ್ದನೆಯ ಬಾಲ, ಚೂಪಾದ ಹಲ್ಲುಗಳನ್ನು ಹೊಂದಿರುತ್ತವೆ.