ಇಂಡೋ ಫೆಸಿಫಿಕ್‌ ಅಭಿವೃದ್ಧಿಗೆ ಕ್ವಾಡ್‌ ನಿಂದ 50 ಬಿಲಿಯನ್‌ ಡಾಲರ್‌ ನೆರವು ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇಂಡೋ ಫೆಸಿಫಿಕ್‌ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ ಕ್ವಾಡ್‌ ಹೇಳಿದೆ. ಮೂಲಸೌಕರ್ಯಗಳಿಗೆ ಹೆಚ್ಚಿನ ಹಣಕಾಸು ನೀಡಿ ಜಾಗತಿಕವಾಗಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಚೀನಾದ ಪ್ರಯತ್ನಗಳ ಮಧ್ಯೆಯೇ ಕ್ವಾಡ್‌ ಈ ನಿರ್ಧಾರವನ್ನು ತೆಗೆದುಕೊಂಡಿದೆ.

“ಕ್ವಾಡ್‌ ಪಾಲುದಾರರು ಈ ಪ್ರದೇಶದಲ್ಲಿ ಮೂಲಸೌಕರ್ಯ ವಿತರಣೆಯನ್ನು ವೇಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಲು ಕ್ವಾಡ್‌ ದೇಶಗಳು ಪರಸ್ಪರ ಸಹಕಾರ ನೀಡಲು ಬದ್ಧವಾಗಿವೆ. ಇದನ್ನು ಸಾಧಿಸಲು 50 ಶತಕೋಟಿ ಬಿಲಿಯನ್‌ ಡಾಲರ್‌ ಹೂಡಿಕೆಯನ್ನು ವಿಸ್ತರಿಸಲಾಗುತ್ತಿದೆ” ಎಂದು ಕ್ವಾಡ್‌ ಹೇಳಿಕೆ ತಿಳಿಸಿದೆ.

“ಜಿ20 ಸಾಮಾನ್ಯ ಚೌಕಟ್ಟಿನ ಅಡಿಯಲ್ಲಿ ಸಾಲ ಸಮಸ್ಯೆಗಳನ್ನು ನಿಭಾಯಿಸಲು ಹಾಗೂ ಇತರ ರಾಷ್ಟ್ರಗಳ ಸಾಮರ್ಥ್ಯವನ್ನು ಬಲಪಡಿಸಲು ಒಟ್ಟಿಗೇ ಕೆಲಸಮಾಡುತ್ತೇವೆ. ಸಾಲದ ಸುಸ್ಥಿರತೆ ಮತ್ತು ಪಾರದರ್ಶಕತೆಗಾಗಿ ಬಹುಪಕ್ಷೀಯ ಸಾಮರ್ಥ್ಯ ನಿರ್ಮಾಣಕ್ಕೆ ಸಹಾಯ ಮಾಡಲು ʼಕ್ವಾಡ್ ಡೆಬ್ಟ್ ಮ್ಯಾನೇಜ್‌ಮೆಂಟ್ ರಿಸೋರ್ಸ್ ಪೋರ್ಟಲ್’ ಸೇರಿದಂತೆ ಇತರ ದೇಶಗಳ ಹಣಕಾಸು ಅಧಿಕಾರಿಗಳೊಂದಿಗೆ ಸಹಯೋಗ ಸಾಧಿಸಲಾಗುತ್ತದೆ” ಎಂದು ಕ್ವಾಡ್‌ ಹೇಳಿಕೆ ತಿಳಿಸಿದೆ.

“ಡಿಜಿಟಲ್ ಸಂಪರ್ಕ, ಶುದ್ಧ ಶಕ್ತಿ ಮತ್ತು ಹವಾಮಾನ ವೈಪರೀತ್ಯ, ಇಂಧನ ಸಮಸ್ಯೆಗಳ ನಿವಾರಣೆಗೆ ಒಗ್ಗಟಾಗಿ ಶ್ರಮಿಸುವುದಾಗಿ ಕ್ವಾಡ್‌ ನಾಯಕರು ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!