Sunday, August 14, 2022

Latest Posts

ಭಾರತದ ಲಸಿಕೆಯುಕ್ತರಿಗೂ ಕ್ವಾರಂಟೈನ್ ಎಂದ ಇಂಗ್ಲೆಂಡ್, ವರ್ಣಬೇಧ ನೀತಿ ನೆನಪಿಸುವ ನಡೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೆನಪು ಮಾಡಿಕೊಳ್ಳಿ. ಕೊರೋನಾ ಮೊದಲನೇ ಅಲೆ ಸಂದರ್ಭದಲ್ಲಿ ಪ್ಯಾರಾಸಿಟಮೋಲ್ ಮಾತ್ರೆಗಳಿಗೆ ಭಾರತದ ಬಳಿ ಅಂಗಲಾಚಿತ್ತು ಇಂಗ್ಲೆಂಡ್. ಆ ಸಮಯದಲ್ಲಿದ್ದ ದೈನ್ಯತೆ ತುಸು ಪರಿಸ್ಥತಿ ಸುಧಾರಿಸುತ್ತಲೇ ಬದಲಾಗಿದೆ. ಆ ಜಾಗದಲ್ಲಿ ಇಂಗ್ಲೆಂಡಿನ ಎಂದಿನ ಜನಾಂಗೀಯ ತಾರತಮ್ಯ ಭಾವನೆ ಹೆಡೆಯಾಡಿದೆ. ಭಾರತದಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ಹೆಚ್ಚಿನವರು ಕೋವಿಶೀಲ್ಡ್ ಪಡೆದಿದ್ದಾರೆ. ಇದು ಯುಕೆ ಮೂಲದ ಅಸ್ಚ್ರಾ ಜೆನಕಾದ ರೂಪವೇ ಆಗಿದೆ. ಹೀಗಿದ್ದೂ ಭಾರತೀಯರೂ ಸೇರಿದಂತೆ ಆಫ್ರಿಕಾದ ದೇಶಗಳ ಜನರೆಲ್ಲ ಯುಕೆಗೆ ತೆರಳಿದ ಪಕ್ಷದಲ್ಲಿ ಕ್ವಾರಂಟೈನ್ ಇನ್ನಿತರ ನಿಯಮಗಳಿಗೆ ಒಳಗಾಗಬೇಕು ಎಂದು ಯುಕೆ ಹೇಳಿದೆ.
ಯುಕೆ ಸರ್ಕಾರದ ಹೊಸ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳು ಭಾರತದಲ್ಲಿ ಲಸಿಕೆ ಹಾಕಿಸಿದ ಜನರನ್ನು ಸಂಪೂರ್ಣ ಕಡೆಗಣಿಸಿವೆ.
ಭಾರತದಲ್ಲಿ ಲಸಿಕೆ ಹಾಕಿಸಿದವರನ್ನು ಸಂಪೂರ್ಣ ಲಸಿಕೆ ಪಡೆದವರು ಎಂದು ಗುರುತಿಸಲಾಗುತ್ತಿಲ್ಲ.
ಇದು ಆಕ್ರಮಣಕಾರಿ, ವಿಲಕ್ಷಣ ಮತ್ತು ಜನಾಂಗೀಯ ನಡೆ ಎಂದೇ ಭಾರತದಲ್ಲಿ ಹಲವರು ಕಿಡಿ ಕಾರಿದ್ದಾರೆ.
ಹೊಸ ನಿಯಮಗಳ ಪ್ರಕಾರ ಭಾರತದಲ್ಲಿ ಎರಡು ಡೋಸ್ ಲಸಿಕೆ ಪಡೆದವರು ಯುಕೆಗೆ ತೆರಳಿದರೆ 10 ದಿನಗಳ ಕಡ್ಡಾಯ ಕ್ವಾರೆಂಟೀನ್‌ಗೆ ಒಳಗಾಗಬೇಕು. ಆದರೆ ಬೇರೆ ದೇಶದವರಿಗೆ ಈ ನಿಯಮ ಇಲ್ಲ.
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಈ ಬಗ್ಗೆ ಮಾತನಾಡಿದ್ದು, ಸಂಪೂರ್ಣ ಲಸಿಕೆ ಪಡೆದ ಭಾರತೀಯರನ್ನು ಕ್ವಾರೆಂಟೀನ್‌ಗೆ ಒಳಪಡುವಂತೆ ಹೇಳುವುದು ಆಕ್ರಮಣಕಾರಿ ನಡೆ ಎಂದಿದ್ದಾರೆ.
ರಾಜ್ಯ ಸಭಾ ಸಂಸದ ಜೈರಾಮ್ ರಮೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಕೋವಿಶೀಲ್ಡ್ ಮೂಲವಾಗಿ ಅಭಿವೃದ್ಧಿಯಾಗಿದ್ದು, ಯುಕೆ ಹಾಗೂ ಸೆರಮ್ ಇನ್ಸ್ಟಿಟ್ಯೂಟ್‌ನಲ್ಲಿ. ಪುಣೆ, ಯುಕೆಗೂ ಕೋವಿಶೀಲ್ಡ್ ಲಸಿಕೆ ನೀಡಿದೆ. ಇದು ವರ್ಣನೀತಿ ಭೇದವಾಗಿದೆ ಎಂದಿದ್ದಾರೆ.
ಸೆ.17ರಂದು ಯುಕೆ ತನ್ನ ಹೊಸ ನೀತಿಗಳನ್ನು ಜಾರಿಗೊಳಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss