Wednesday, November 29, 2023

Latest Posts

ಶೀಘ್ರ ಲೋಡ್​ ಶೆಡ್ಡಿಂಗ್ ಸಮಸ್ಯೆಗೆ ಪರಿಹಾರ: ಕೃಷಿ ಸಚಿವ ಚೆಲುವರಾಯಸ್ವಾಮಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿದ್ಯುತ್ ಉತ್ಪಾದನೆ ಕಡಿಮೆಯಾಗಿದ್ದು, ರಾಜ್ಯದಲ್ಲಿ ತುಂಬಾ ಸಮಸ್ಯೆ ಇದೆ. ಒಂದು ವಾರದೊಳಗೆ ಸಮಸ್ಯೆ ಬಗೆ ಹರಿಸುವ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಬಯಲು ಸೀಮೆ ಕಡೆ ಸಮಸ್ಯೆ ಬಹಳ ಇದೆ ಅದನ್ನು ಸರಿಪಡಿಸಬೇಕು ಎಂಬುದು ಸರ್ಕಾರದ ಉದ್ದೇಶ. ಶೀಘ್ರ ಲೋಡ್​ ಶೆಡ್ಡಿಂಗ್ ಸಮಸ್ಯೆ ಸರಿಪಡಿಸುತ್ತೇವೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಉಡುಪಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೊರ ಜಿಲ್ಲೆಯಿಂದ ವಿದ್ಯುತ್ ಖರೀದಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ದುಬಾರಿಯಾದರೂ ವಿದ್ಯುತ್ ಖರೀದಿ ಮಾಡಲೇಬೇಕಾಗುತ್ತದೆ ಎಂದು ಹೇಳಿದರು.

ಕುಟುಂಬದವರನ್ನು ರಾಜಕೀಯ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚಿಸಿಲ್ಲ
ಸಚಿವ ಚೆಲುವರಾಯಸ್ವಾಮಿ ಪತ್ನಿಗೆ ಮಂಡ್ಯ ಎಂಪಿ ಟಿಕೆಟ್ ಚರ್ಚೆ ವಿಚಾರ ಪ್ರತಿಕ್ರಿಯೆ ನೀಡಿದ್ದು, ನನ್ನ ಕುಟುಂಬದವರನ್ನು ರಾಜಕೀಯದಲ್ಲಿ ಸ್ಪರ್ಧೆಗಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ. ಅಭ್ಯರ್ಥಿ ಯಾರೆಂದು ಕಾರ್ಯಕರ್ತರು ಮತ್ತು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡುತ್ತದೆ. ಸ್ನೇಹಿತರು ಪಕ್ಷದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾವರ ಶುಗರ್ ಫ್ಯಾಕ್ಟರಿ ಗುಜುರಿ ಗೋಲ್ ಮಾಲ್​​ ವಿಚಾರ ಮಾತನಾಡಿ, ಗುಜರಿ ವಿಲೇವಾರಿ ವಿಚಾರದಲ್ಲಿ ಗೋಲ್ ಮಾಲ್ ನಡೆದಿರುವೆ ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಗಮನಕ್ಕೆ ತರಲಾಗಿದೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಬ್ರಹ್ಮಾವರದಲ್ಲಿ ಹೊಸ ಶುಗರ್ ಫ್ಯಾಕ್ಟರಿ ಆರಂಭದ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರಕರಣ ತನಿಖೆಗೆ ಆದೇಶ ಮಾಡುವ ಹಂತದಲ್ಲಿ ಇದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಯಿಂದ 15 ಕಡೆ ಕೃಷಿ ಕಾಲೇಜಿಗೆ ಬೇಡಿಕೆ ಇದೆ. ಕೃಷಿ ಕಾಲೇಜಿಗೆ ಸಂಶೋಧನಾ ಕೇಂದ್ರ, ಜಮೀನು -ಕಟ್ಟಡ ಎಲ್ಲವೂ ಉಡುಪಿಯಲ್ಲಿದೆ. ಕೃಷಿ ಕಾಲೇಜಿಗೆ ಉಡುಪಿ ಉತ್ತಮ ಜಿಲ್ಲೆ ಎಂದು ಅನಿಸುತ್ತಿದೆ. ಕೃಷಿ ವಿವಿ ಮತ್ತು ಸರ್ಕಾರದ ಜೊತೆ ಚರ್ಚೆ ಮಾಡುತ್ತೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!