ಕೈಕೊಟ್ಟ ಡೇವಿಡ್ ವಾರ್ನರ್‌: ಎರಡನೇ ಪಂದ್ಯದಿಂದ ತಲೆತಂಡ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಅನುಭವಿಸಿದ್ದು, ಹೀಗಾಗಿ ಎರಡನೇ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್‌ಗೆ ಎರಡನೇ ಪಂದ್ಯದಿಂದ ಹೊರ ಉಳಿಯುವ ಸಾಧ್ಯತೆವಿದೆ.

ಭಾರತದಲ್ಲಿ ಡೇವಿಡ್ ವಾರ್ನರ್ ಟೆಸ್ಟ್ ಅಂಕಿ ಅಂಶಗಳು ಅಷ್ಟೇನು ಉತ್ತಮವಾಗಿಲ್ಲ. ಭಾರತದ ವಿರುದ್ಧ ಆಡಿರುವ 16 ಪಂದ್ಯಗಳಲ್ಲಿ ಅವರು 11 ಬಾರಿ ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಔಟಾಗಿದ್ದಾರೆ.

ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪಿಚ್‌ ಸ್ಪಿನ್ನರ್ ಗೆ ಹೆಚ್ಚಿನ ನೆರವು ನೀಡಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಸ್ಟ್ರೇಲಿಯಾ ಹೆಚ್ಚುವರಿ ಸ್ಪಿನ್ನರ್ ನನ್ನು ತಂಡಕ್ಕೆ ಸೇರಿಸಿಕೊಳ್ಳಲು ರಣತಂತ್ರ ರೂಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!