Wednesday, August 10, 2022

Latest Posts

ನೌಕಾಪಡೆಯ ಪಶ್ಚಿಮ ವಿಭಾಗದ‌ ಮುಖ್ಯಸ್ಥರಾಗಿ ಆರ್‌. ಹರಿಕುಮಾರ್ ನೇಮಕ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನೌಕಾಪಡೆಯ ಪಶ್ಚಿಮ ವಿಭಾಗದ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಆಗಿ ವೈಸ್‌ ಆಡ್ಮಿರಲ್‌ ಆರ್‌. ಹರಿಕುಮಾರ್‌ ಅವರು ಭಾನುವಾರ ನೇಮಕವಾಗಿದ್ದಾರೆ.
ವೈಸ್‌ ಅಡ್ಮಿರಲ್‌ ಅಜಿತ್‌ ಕುಮಾರ್‌ ಅವರು ಹರಿಕುಮಾರ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು. 2019ರಿಂದ ಈ ಹುದ್ದೆಗೇರಿದ ಅಜಿತ್‌ ಕುಮಾರ್‌ 40 ವರ್ಷಗಳ ಸುದೀರ್ಘ ಸೇವೆ ಮುಗಿಸಿ ನಿವೃತ್ತರಾಗುತ್ತಿದ್ದಾರೆ ಎಂದು ನೌಕಾಪಡೆಯ ಪ್ರಕಟಣೆ ತಿಳಿಸಿದೆ.
ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿರುವ ಆರ್‌. ಹರಿಕುಮಾರ್‌ ನೌಕಾಪಡೆಗೆ 1983ರ ಜನವರಿ 1ರಂದು ನಿಯೋಜನೆಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss