ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ನೂರಾರು ಕೋಟಿ ಭೂಹಗರಣದ ಗಂಭೀರ ಆರೋಪವನ್ನು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಾಡಿದ್ದಾರೆ.
ಗೃಹ ಸಚಿವ ಡಾ.ಜಿ ಪರಮೇಶ್ವರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್, ಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರ ಸಮ್ಮುಖದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಿರುದ್ಧ ಭೂ ಅಕ್ರಮದ ಆರೋಪ ಮಾಡಿ ದಾಖಲೆ ಬಿಡುಗಡೆ ಮಾಡಿದರು.
ಕಳೆದ ಕೆಲ ದಿನಗಳಿಂದ ಮುಡಾ ಬಗ್ಗೆ ಚರ್ಚೆಯಾಗ್ತಿದೆ. ಮುಖ್ಯಮಂತ್ರಿಗಳ ಪತ್ನಿ ಮುಡಾಗೆ ನಿವೇಶನಗಳನ್ನ ವಾಪಸ್ ಮಾಡಿದ್ದಾರೆ. ಆದರೂ ಬಿಜೆಪಿಯ ಮುಖಂಡರು ವಾಪಸ್ ಕೊಟ್ಟಿರೋದೆ ಸರಿಯಿಲ್ಲ. ತಪ್ಪನ್ನ ಒಪ್ಪಿಕೊಂಡಂತಾಯ್ತು ಅಂತಾ ಬೇರೆ ಬೇರೆ ಅರ್ಥದಲ್ಲಿ ಮಾತಾಡ್ತಿದ್ದಾರೆ. ಆದ್ರೆ ವಿಪಕ್ಷ ನಾಯಕ ಆರ್. ಅಶೋಕ್ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಅವಧಿಯಲ್ಲಾದ ಹಗರಣದ ಬಗ್ಗೆ ರಾಜ್ಯದ ಜನರ ಮುಂದಿಡೋಕೆ ಬಂದಿದ್ದೀವಿ ಎಂದು ಹೇಳಿದರು.
ಲೊಟ್ಟೆಗೊಲ್ಲಹಳ್ಳಿ ನೂರಾರು ಕೋಟಿ ರೂ. ಬೆಲೆ ಬಾಳುವ ಜಮೀನಿನ ಹಗರಣ ಇದು. ವಿತ್ ರೆಕಾರ್ಡ್ಸ್ ನಾವು ನಿಮ್ಮ ಮುಂದೆ ಮಂಡಿಸುತ್ತೇವೆ. ಲೊಟ್ಟೆಗೊಲ್ಲಹಳ್ಳಿ ಸರ್ವೆ ನಂಬರ್ 10/1 ರಲ್ಲಿ 32 ಗುಂಟೆ ಜಮೀನನ್ನು ಬಿಡಿಎ ನೋಟಿಫೈ ಮಾಡಿತ್ತು. 1977 ಫೆಬ್ರವರಿಯಲ್ಲಿ ಬಿಡಿಎ ಭೂಸ್ವಾಧೀನಕ್ಕೆ ಮೊದಲ ನೊಟಿಫಿಕೇಷನ್ ಹೊರಡಿಸಿತ್ತು.26 ಫೆಬ್ರವರಿ 2003ರಲ್ಲಿ ಹಾಗೂ 2007ರಲ್ಲಿ ಈ ಜಮೀನನ್ನು ಅಕ್ರಮವಾಗಿ ಕಬಳಿಸಲಾಗಿದೆ. ಬಿಡಿಎ ನೊಟಿಫಿಕೇಷನ್ಗೂ ಮೊದಲು ಈ ಜಮೀನು ರಾಮಸ್ವಾಮಿ ಎನ್ನುವವರ ಒಡೆತನದಲ್ಲಿತ್ತು. ಅದಾದ ಬಳಿಕ ಈ ಜಮೀನು 26 ವರ್ಷ ಬಿಡಿಎ ಒಡೆತನದಲ್ಲಿತ್ತು. ಆದರೆ 2003ರಲ್ಲಿ ಒಂದು ಬಾರಿ ಹಾಗೂ 2007ರಲ್ಲಿ ಆರ್ ಅಶೋಕ್ ಶುದ್ಧಕ್ರಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
38 ಗುಂಟೆ ಬಿಡಿಎ ಭೂಮಿಯನ್ನು ಅಕ್ರಮವಾಗಿ ರೆಜಿಸ್ಟರ್ ಮಾಡಿಸಿಕೊಂಡಿದ್ದಾರೆ ಆರ್ ಅಶೋಕ್. 16/10/2009ರಲ್ಲಿ ರಾಮಸ್ವಾಮಿ ಕಡೆಯವರಿಂದ ಈ ಜಮೀನನ್ನು ಡಿ ನೊಟಿಫಿಕೇಷನ್ ಮಾಡಿಕೊಡಲು ಅರ್ಜಿ ಸಲ್ಲಿಸುತ್ತಾರೆ. ಅಂದಿನ ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪನವರು ಆ ಕಡತದ ಮೇಲೆ ಕೂಡಲೇ ಮಂಡಿಸಿ ಎಂದು ಬರೆದು ಸಹಿ ಹಾಕಿದ್ದಾರೆ. ಅಸಲಿಗೆ ಈ ಸರ್ವೇ ನಂಬರ್ ಜಮೀನಿನ ಮಾಲೀಕತ್ವ 1977ರಲ್ಲಿ ಬಂದಿದೆ. ಆದರೆ ರಾಮಸ್ವಾಮಿಯಿಂದ ಆರ್ ಅಶೋಕ್ ಕ್ರಯ ಮಾಡಿಸಿಕೊಂಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಜಿವಿ ಅತ್ರಿ ಎಂಬವರು ಲೋಕಾಯುಕ್ತದಲ್ಲಿ ಈ ಕೇಸ್ಗೆ ಸಂಬಂಧ ಪೆಟಿಷನ್ ಹಾಕಿದ್ದರು. ಪೆಟಿಷನ್ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಮೇಲೆ ಆರ್ ಅಶೋಕ್ ಜಮೀನು ವಾಪಾಸ್ ಕೊಡುವ ನಿರ್ಧಾರ ಮಾಡುತ್ತಾರೆ. 28/07/2011ರಲ್ಲಿ ಬಿಡಿಎಗೆ ವಾಪಾಸ್ ಕೊಡುವ ಬಗ್ಗೆ ಪತ್ರ ಬರೆದಿದ್ದರು. ಬಿಡಿಎ ಸ್ವತ್ತನ್ನೇ ಆರ್ ಅಶೋಕ್ ವಾಪಾಸ್ ಬಿಡಿಗೆ ಕೊಡಲು ಯಾರು ಈತ? ಈ ಕೇಸ್ ಹೈ ಕೋರ್ಟ್ ಮೆಟ್ಟಿಲೇರುತ್ತೆ. ಈ ವೇಳೆ ಹೈ ಕೋರ್ಟ್ ಈ ಜಾಗ ಸದ್ಯ ಬಿಡಿಎ ಕೈಯಗೆ ಸೇರಿದೆ. ಹೀಗಾಗಿ ಆರೋಪಿತರ ಮೇಲೆ ಯಾವುದೇ ಕ್ರಿಮಿನಲ್ ಕೇಸ್ ಹಾಕುವ ಅಗತ್ಯ ಇಲ್ಲ ಎಂದು ಹೈ ಕೋರ್ಟ್ ಹೇಳಿತ್ತು ಎಂದು ತಿಳಿಸಿದ್ದಾರೆ.
ಈಗ ಸಿದ್ದರಾಮಯ್ಯ ಪತ್ನಿ ಅವರು ವಾಪಾಸ್ ಕೊಟ್ಟ ಮೇಲೂ ಬಿಜೆಪಿಗರು ಏನು ಹೇಳುತ್ತಿದ್ದಾರೆ? ನಿಮ್ಮ ಜಮೀನೆ ಅಲ್ಲದ ಜಮೀನನ್ನು ನೀವು ವಾಪಾಸ್ ಕೊಟ್ಟು ಬಂದಿದ್ದೀರಿ. ನೀವು ಈಗ ಉಡುಗೊರೆಯಾಗಿ ಸಿಕ್ಕ ಜಮೀನು ವಾಪಾಸ್ ಕೊಟ್ಟ ಮೇಲೂ ಆರೋಪ ಮುಂದುವರೆಸುತ್ತಿದ್ದೀರಿ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಶ್ರೀಮತಿಯವರಿಗೆ ಸಿಕ್ಕ ಉಡುಗೊರೆ ಮುಡಾಗೆ ವಾಪಾಸ್ ಕೊಟ್ಟಿದ್ದಾರೆ. ವಾಪಾಸ್ ಕೊಟ್ಟ ಮೇಲೂ ಬಿಜೆಪಿ ನಾಯಕರು ತಗಾದೆ ಮಾಡುತ್ತಾರೆ. ನೀವು ಈಗ ಅಕ್ರಮ ಮಾಡಿರೋದು ಒಪ್ಪಿಕೊಂಡಂತಾಯ್ತು ಅಂತ ಹೇಳುತ್ತಿದ್ದಾರೆ. ಆರ್ ಅಶೋಕ್ ಅವರಿಗೆ ದೊಡ್ಡ ಜವಾಬ್ದಾರಿ ಇದೆ. ಸರ್ಕಾರದ ಜಾಗ ಕಬಳಿಸಿ ಸಿಕ್ಕಾಕ್ಕೊಂಡಂಗಾಯ್ತು ಅಂತ ಆರ್ ಅಶೋಕ್ ಹೇಳಿದ್ದಾರೆ. ಈಗ ನಾವು ಬಿಜೆಪಿ ಅವಧಿಯಲ್ಲಿ ಆದ ಕೆಲವು ಪ್ರಕರಣಗಳನ್ನು ರಾಜ್ಯದ ಜನತೆ ಮುಂದೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ.