CINEMA| ಆ ಪಟ್ಟಿಯಲ್ಲಿ ಶಾರುಖ್ ಖಾನ್‌ ಮೀರಿಸಿ ಟಾಪ್1 ಸ್ಥಾನ ಪಡೆದ ನಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನಪ್ರಿಯ ಚಲನಚಿತ್ರ ವಿಶ್ಲೇಷಣೆ ಮತ್ತು ರೇಟಿಂಗ್ ಸೈಟ್ IMDb ಇತ್ತೀಚೆಗೆ ಭಾರತದಲ್ಲಿ ಹೊಸ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ. ಇದು ತನ್ನ ಸೈಟ್ ಮತ್ತು ಅಪ್ಲಿಕೇಶನ್‌ಗಳಲ್ಲಿ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಹೆಸರಿನಲ್ಲಿ ಈ ವಿಶೇಷತೆಯನ್ನ ತಂದಿದೆ. ಇದರಲ್ಲಿ ಭಾರತದ ಟಾಪ್ ಸೆಲೆಬ್ರಿಟಿಗಳ ಪಟ್ಟಿಯನ್ನು ಪ್ರತಿ ವಾರ ಇಡಲಾಗುತ್ತದೆ. IMDb ಇತ್ತೀಚೆಗೆ ಬಿಡುಗಡೆಯಾದ ಚಲನಚಿತ್ರಗಳು, ಸರಣಿ ವೀಕ್ಷಣೆಗಳು, ಸೆಲೆಬ್ರಿಟಿ ಪುಟಗಳಲ್ಲಿ ವೀಕ್ಷಕರು ಕಳೆದ ಸಮಯವನ್ನು ಆಧರಿಸಿ IMDb ಈ ರೇಟಿಂಗ್‌ಗಳನ್ನು ನೀಡುತ್ತದೆ.

ಇತ್ತೀಚೆಗೆ ನೀಡಿರುವ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ರೇಟಿಂಗ್‌ನಲ್ಲಿ ನಾಯಕಿ ರಾಶಿ ಖನ್ನಾ ಸ್ಟಾರ್ ನಟರನ್ನು ಹಿಂದಿಕ್ಕಿ ಅಗ್ರಸ್ಥಾನದಲ್ಲಿ ನಿಂತಿರುವುದು ಗಮನಾರ್ಹ. ಇದರಲ್ಲಿ ಶಾರುಖ್ ಖಾನ್ ಅವರ ಹೆಸರನ್ನೂ ಸಹ ಉಡೀಸ್‌ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಪಠಾಣ್ ಟ್ರೆಂಡಿಂಗ್ ನಲ್ಲಿದ್ದುದು ಗೊತ್ತೇ ಇದೆ. ಆದರೆ, ಶಾರುಖ್ ಎರಡನೇ ಸ್ಥಾನದಲ್ಲಿದ್ದಾರೆ. ಇತ್ತೀಚೆಗಷ್ಟೇ ಫರ್ಜಿ ಹೆಸರಿನ ಸರಣಿ ಬಿಡುಗಡೆಯಾಗಿದೆ. ಅದರಲ್ಲಿ ರಾಶಿ ಖನ್ನಾ ನಾಯಕಿಯಾಗಿ ಮಾಡಿದ್ದಾಳೆ. ಈ ಸರಣಿಯು ವೈರಲ್ ಆಗಿದ್ದು, ದೊಡ್ಡ ಯಶಸ್ಸನ್ನು ಗಳಿಸಿತು. ಬಾಲಿವುಡ್ ನಲ್ಲೂ ರಾಶಿಗೆ ಸಾಲು ಸಾಲು ಆಫರ್ ಗಳು ಬರುತ್ತಿವೆ. ಇದರೊಂದಿಗೆ ಶಾರುಖ್ ಅವರನ್ನು ಹಿಂದಿಕ್ಕಿ ರಾಶಿ ಖನ್ನಾ IMDb ಟಾಪ್ ಸ್ಥಾನದಲ್ಲಿ ನಿಂತಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಶಾರುಖ್ ಖಾನ್ ಎರಡನೇ ಸ್ಥಾನದಲ್ಲಿದ್ದರೆ, ವಿಜಯ್ ಸೇತುಪತಿ, ರೆಜಿನಾ, ಆದಿತ್ಯ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರದ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಕಿಯಾರಾ ಅಡ್ವಾಣಿ 10ನೇ ಸ್ಥಾನದಲ್ಲಿದ್ದರೆ, ರಾಮ್ ಚರಣ್ 15ನೇ ಸ್ಥಾನದಲ್ಲಿದ್ದಾರೆ.

https://www.instagram.com/p/Co9b_5PLwtV/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!