Tuesday, July 5, 2022

Latest Posts

ರಬಾಡ- ಲುಂಗಿ ಎಂಗಿಡಿ ಬೌಲಿಂಗ್ ದಾಳಿಗೆ ಉದುರಿದ ವಿಕೆಟ್: ಭಾರತ 327 ರನ್​ಗಳಿಗೆ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಟೆಸ್ಟ್ ನ ಮೂರನೇ ದಿನವಾದ ಇಂದು ಭಾರತ ರಬಾಡ ಮತ್ತು ಲುಂಗಿ ಎಂಗಿಡಿ ದಾಳಿಗೆ ಸಿಲುಕಿ 327ರನ್​ಗಳಿಗೆ ಆಲೌಟ್ ಆಗಿದೆ.
ಮೊದಲ ದಿನ 3 ವಿಕೆಟ್​ ಕಳೆದುಕೊಂಡು 272 ರನ್​ಗಳಿಸಿದ್ದ ಭಾರತ, 2ನೇ ದಿನ ಮಳೆ ಕಾರಣ ಆಟವಾಡದೇ , 3ನೇ ದಿನ ಇಂದು ಬ್ಯಾಟಿಂಗ್ ಆರಂಭಿಸಿತ್ತು.
ಇಂದು ಭಾರತ ಕೇವಲ 55 ರನ್​​ ಗಳಿಸಿ 7 ವಿಕೆಟ್ ಕಳೆದುಕೊಂಡಿತು.
ಮಂಗಳವಾರ 122 ರನ್​ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಕೆಎಲ್ ರಾಹುಲ್​ ಒಂದು ರನ್​ಗಳಿಸಿ ರಬಾಡಗೆ ವಿಕೆಟ್​​ ಒಪ್ಪಿಸಿದರು. ರಹಾನೆ 48 ರನ್​ಗಳಿಸಿ ಎಂಗಿಡಿಗೆ ವಿಕೆಟ್​ ಒಪ್ಪಿಸಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಭಾರತ ಸತತ 4 ಓವರ್​ಗಳಲ್ಲಿ ಅಶ್ವಿನ್​(4), ರಿಷಭ್ ಪಂತ್(8), ಶಾರ್ದೂಲ್ ಠಾಕೂರ್​(4) ಮತ್ತು ಮೊಹಮ್ಮದ್​ ಶಮಿ(8) ವಿಕೆಟ್​ ಕಳೆದುಕೊಂಡಿತು.
ಕೊನೆಯ ವಿಕೆಟ್​ಗೆ ಜಸ್ಪ್ರೀತ್ ಬುಮ್ರಾ(14) ಮತ್ತು ಮೊಹಮ್ಮದ್ ಸಿರಾಜ್​ (4) 19 ರನ್​ ಗಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss