ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಆನಂದ ನೀಡುವ ದೃಶ್ಯಗಳಿಗೇನು ಕೊರತೆಯಿಲ್ಲ. ಇವುಗಳಲ್ಲಿ ಕೆಲವು ದೃಶ್ಯಗಳಂತು ನಮ್ಮ ಮೊಗದಲ್ಲಿ ಖುಷಿಯ ದೊಡ್ಡ ನಗುವರಳಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ಮೊಲದ ಅಪರೂಪದ ದೃಶ್ಯ.
ಮೊಲಗಳು ಹಸಿರಿನ ಮೇಲೆಯೇ ಇರುವಂತಹ ಪ್ರಾಣಿ. ಅವಕ್ಕೆ ನೀರು ಕಂಡರೆ ಭಯ. ಹಾಗಾಗಿ ಮೊಲ ನೀರಿನಲ್ಲಿಈಜುವುದು ಕಡಿಮೆ ಎಂದು ಹಲವರು ಹೇಳುತ್ತಾರೆ. ಆದರೆ ತಮಗೆ ಅಪಯಾವಿದೆ ಎನಿಸಿದಾಗ ಮೊಲಗಳು ಈಜುತ್ತವೆಯಂತೆ.
ಇದೀಗ ಮೊಲ ಈಜಾಡುತ್ತಿರುವ ಈ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೊಲವೊಂದು ತನ್ನ ಪುಟ್ಟ ಕಾಲುಗಳಲ್ಲಿ ಆರಾಮವಾಗಿ ನದಿಯಲ್ಲಿ ಈಜುತ್ತಿರುವ ದೃಶ್ಯ ಇದಾಗಿದೆ.
ಟ್ವೀಟರ್ ನಲ್ಲಿ @Buitengebieden 30 ಸೆಕೆಂಡಿನ ಈ ವಿಡಿಯೋ ಹಂಚಿಕೊಂಡಿದ್ದಾರೆ. ಮೊಲದ ಮೋಜು ನೋಡಿ ನೆಟ್ಟಿಗರು ಪಿಧಾ ಆಗಿದ್ದಾರೆ.
Rabbits can swim fast.. 🐰 pic.twitter.com/e4VEgFH1Ce
— Buitengebieden (@buitengebieden_) August 28, 2021