Friday, July 1, 2022

Latest Posts

ಜನಾಂಗ ನಿಂದನೆ: ಬಟ್ಲರ್, ಮೋರ್ಗನ್ ವಿರುದ್ಧವೂ ಕ್ರಮ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ರಾಬಿನ್ಸನ್ ಪ್ರಕರಣದ ಬಳಿಕ ಇದೀಗ ಇಂಗ್ಲೆಂಡಿನ ಪ್ರಮುಖ ಆಟಗಾರರಾದ ಬಟ್ಲರ್ ಮತ್ತು ಇಯಾನ್ ಮೋರ್ಗನ್ ಕೂಡ ಜನಾಂಗೀಯ ನಿಂದನೆಯ ಆರೋಪದಡಿ ಶಿಸ್ತು ಕ್ರಮ ಎದುರಿಸಬಹುದಾದ ಸಾಧ್ಯತೆಗೆ ಸಿಲುಕಿದ್ದಾರೆ.
ಬಟ್ಲರ್ ಮತ್ತು ಮೋರ್ಗನ್‌ರವರು ಭಾರತೀಯರ ವಿರುದ್ಧ ಜನಾಂಗೀಯ ನಿಂದನೆಗೆ ಸಮಾನವಾದ ವ್ಯಂಗ್ಯ ಟ್ವೀಟ್ ಮಾಡಿರುವುದು ಪತ್ತೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಇಸಿಬಿ ಚಿಂತಿಸುತ್ತಿದೆ.
ಇದೇವೇಳೆ, ವೇಗದ ಬೌಲರ್ ಆಂಡರ್ಸನ್  ೨೦೧೦ರಲ್ಲಿ ನಿಂದನಾತ್ಮಕ ಟೀಕೆಯೊಂದನ್ನು ಮಾಡಿರುವುದು ಕಂಡುಬಂದಿದೆ. ಆದರೆ ತಾನೀಗ ಸಾಕಷ್ಟು ಬದಲಾಗಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss