ರಾಗಿಹಿಟ್ಟು ತಿನ್ನೋದಕ್ಕೆ ವಿಧಾನಗಳನ್ನು ಹುಡುಕಬೇಕಿದೆ. ಎಲ್ಲರಿಗೂ ಮುದ್ದೆ ಇಷ್ಟ ಆಗೋದಿಲ್ಲ. ಅದನ್ನು ಬಿಟ್ಟರೆ ಉಳಿಯೋದು ರಾಗಿ ರೊಟ್ಟಿ ಹಾಗೂ ರಾಗಿ ದೋಸೆ ಮಾತ್ರ.ರಾಗಿ ತಾಳಿಪಟ್ಟು ಹೀಗೆ ಮಾಡಿ..
ಸಾಮಾಗ್ರಿಗಳು
ರಾಗಿಹಿಟ್ಟು
ಈರುಳ್ಳಿ
ಹಸಿಮೆಣಸು
ಸಬಸ್ಸಿಗೆ
ಕ್ಯಾರೆಟ್ ತುರಿ
ಕಾಯಿ
ಉಪ್ಪು
ಓಂ ಕಾಳು
ಕೊತ್ತಂಬರಿ
ಕರಿಬೇವು
ಮಾಡುವ ವಿಧಾನ
ಮೊದಲಿಗೆ ಮೇಲೆ ನಮೂದಿಸಿದ ಎಲ್ಲವನ್ನು ಪಾತ್ರೆಗೆ ಹಾಕಿ.
ನಂತರ ಇದಕ್ಕೆ ರಾಗಿಹಿಟ್ಟು ನೀರು ಹಾಕಿ ಮಿಕ್ಸ್ ಮಾಡಿ, ರೊಟ್ಟಿ ಹದಕ್ಕೆ ತಂದುಕೊಳ್ಳಿ
ನಂತರ ಎಣ್ಣೆಯಲ್ಲಿ ಇದನ್ನು ತಟ್ಟಿ ಬೇಯಿಸಿದರೆ ತಾಳಿಪಟ್ಟು ರೆಡಿ..