spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಹುಲ್​ ದ್ರಾವಿಡ್​ ಭಾರತ ತಂಡದ ನೂತನ ಕೋಚ್?

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಸ್ಥಾನವನ್ನು ಅಲಂಕರಿಸಲು ರಾಹುಲ್​ ದ್ರಾವಿಡ್​ ಸಮ್ಮತಿ ಸೂಚಿಸಿದ್ದಾರೆ. ದುಬೈನಲ್ಲಿ ಅಕ್ಟೋಬರ್​ 17 ರಿಂದ ನವೆಂಬರ್​ 14 ರವರೆಗೆ ನಡೆಯಲಿರುವ ಟಿ20 ವರ್ಲ್ಡ್​ ಕಪ್​ನ ನಂತರ ಅವರು ಕಾರ್ಯಾರಂಭ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ 6 ವರ್ಷಗಳಿಂದ ಭಾರತದ ಎ ಟೀಂ ಮತ್ತು ಅಂಡರ್​ 19 ಟೀಂಗಳ ಉಸ್ತುವಾರಿ ವಹಿಸಿಕೊಂಡಿರುವ 48 ವರ್ಷದ ದ್ರಾವಿಡ್, ಆರಂಭಿಕವಾಗಿ ಈ ಬಗ್ಗೆ ಹಿಂಜರಿಕೆ ತೋರಿದರು. ಆದರೆ, ನಿನ್ನೆ ಐಪಿಎಲ್​ ಫೈನಲ್ಸ್​ನ ಸಮಯದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್​ ಷಾ ಅವರೊಂದಿಗೆ ಮಾತನಾಡಿ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ದ್ರಾವಿಡ್​, ಹೆಡ್​ ಕೋಚ್​ ಸ್ಥಾನಕ್ಕೆ ವಿದಾಯ ಹೇಳುತ್ತಿರುವ ಹಿರಿಯ ಆಟಗಾರ ರವಿ ಶಾಸ್ತ್ರಿ ಅವರ ಸ್ಥಾನ ಪಡೆಯಲಿದ್ದಾರೆ. ರಾಹುಲ್​ ದ್ರಾವಿಡ್​ರ ತರಬೇತಿ ವ್ಯವಸ್ಥೆಯಲ್ಲಿ ಭಾರತಕ್ಕೆ ಈಗಾಗಲೇ ರಿಷಭ್​ ಪಂತ್​, ಅವೇಶ್​ ಖಾನ್​, ಪೃಥ್ವಿ ಶಾ, ಹನುಮ ವಿಹಾರಿ, ಶುಬ್ಮಾನ್​ ಗಿಲ್​ರಂಥ ಆಟಗಾರರು ಲಭಿಸಿದ್ದಾರೆ.
ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss