ಮೊದಲು ಹೀರೋ ಎನಿಸಿಕೊಂಡು ಬಳಿಕ ವಿಲನ್ ಆದ ರಾಹುಲ್: ನೆಟ್ಟಿಗರ ಟ್ರೋಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಮತ್ತ ಬಾಂಗ್ಲಾದೇಶ ನಡುವಿನ ಸರಣಿಯ ಮೊದಲ ಪಂದ್ಯದಲ್ಲಿ ಹೀರೋ ಆಗಬೇಕಾಗಿದ್ದ ಕೆ. ಎಲ್‌ ರಾಹುಲ್‌ ಏಕಾಏಕಿ ವಿಲನ್ ಆಗಿದ್ದಾರೆ.

ಬಾಂಗ್ಲಾದೇಶ ವಿರುದ್ಧ ತಂಡಕ್ಕೆ ಆಸರೆಯಾಗಿ ಅಜೇಯ ೩೮ ರನ್‌ ಬಾರಿಸಿದ್ದ ರಾಹುಲ್, ಮೆಹೆದಿ ಹಸನ್‌ ಅವರ ಸುಲಭ ಕ್ಯಾಚ್‌ ಕೈ ಚೆಲ್ಲುವ ಮೂಲಕ ತಂಡದ ಸೋಲಿಗೆ ಕಾರಣರಾದರು.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೆ. ಎಲ್‌ ರಾಹುಲ್‌ ಟ್ರೆಂಡ್‌ ಟ್ರೊಲ್ ಆಗುತ್ತಿದ್ದಾರೆ .

 

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ೪೧.೨ ಓವರ್‌ಗಳಲ್ಲಿ ೧೮೬ ರನ್‌ಗಳಿಗೆ ಆಲ್‌ಔಟ್‌ ಆಯಿತು. ಘಟಾನುಘಟಿ ಬ್ಯಾಟರ್‌ಗಳು ವೈಫಲ್ಯ ಕಂಡ ವೇಳೆ ಕೆ. ಎಲ್‌ ರಾಹುಲ್‌ ಐದನೆಯವರಾಗಿ ಬ್ಯಾಟ್‌ ಮಾಡಲು ಇಳಿದರು. ನಿಧಾನಗತಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ಆಸರೆಯಾದರು. ಬ್ಯಾಟ್‌ ಬೀಸಿ ೭೦ ಎಸೆತಗಳಲ್ಲಿ ೭೩ ರನ್‌ ಬಾರಿಸಿದರು.ಈ ಮೂಲಕ ಎಲ್ಲರ ಪಾಲಿಗೆ ಹೀರೋ ಎನಿಸಿಕೊಂಡರು.

ಆದರೆ ವಿಕೆಟ್‌ಕೀಪರ್‌ ಮಾಡುತ್ತಿದ್ದ ವೇಳೆ ಕೆ. ಎಲ್‌ ರಾಹುಲ್‌ ಮೆಹೆದಿ ಹಸನ್‌ ೧೫ ರನ್‌ ಗಳಿಸಿದ್ದಾಗ ನೀಡಿದ್ದ ಸುಲಭವಾಗಿ ನೀಡಿದ್ದ ಕ್ಯಾಚ್‌ ಅನ್ನು ಕೈ ಚೆಲ್ಲಿದ್ದರು.ಈ ಕ್ಯಾಚ್‌ ಭಾರತ ತಂಡದ ಸೋಲಿಗೆ ಕಾರಣವಾಯಿತು. ಹೀಗಾಗಿ ಕೆ. ಎಲ್‌ ರಾಹುಲ್‌ ಒಂದೇ ಪಂದ್ಯದಲ್ಲಿ ಹೀರೊ ಹಾಗೂ ವಿಲನ್‌ ಎನಿಸಿಕೊಂಡರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!