ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನ ಮೊದಲೆರೆಡು ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿದ್ದು, ತಂಡದ ಕ್ಯಾಪ್ಟನ್ ವಿರಾಟ್ ಕೋಹ್ಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ನಿಂದನಾತ್ಮಕ ಸಂದೇಶಗಳು ಹರಿದಾಡುತ್ತಿವೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ವಿರಾಟ್ರನ್ನು ಚೀರ್ ಅಪ್ ಮಾಡಿದ್ದಾರೆ. ಪ್ರೀತಿಯ ವಿರಾಟ್, ಈ ಜನರ ಮನಸ್ಸಿನಲ್ಲಿ ದ್ವೇಷವೇ ತುಂಬಿದೆ ಯಾಕೆಂದರೆ ಅವರಿಗೆ ಯಾರೂ ಪ್ರೀತಿಯೇ ಕೊಟ್ಟಿಲ್ಲ, ಇಂಥವರನ್ನೆಲ್ಲ ಕ್ಷಮಿಸಿಬಿಡಿ, ತಂಡವನ್ನು ರಕ್ಷಿಸಿ ಎಂದು ಟ್ವೀಟ್ ಮಾಡಿದ್ದಾರೆ.
Dear Virat,
These people are filled with hate because nobody gives them any love. Forgive them.
Protect the team.
— Rahul Gandhi (@RahulGandhi) November 2, 2021