ಶಿವಾಜಿ ಕುರಿತಾದ ಸತೀಶ್ ಜಾರಕಿಹೊಳಿ ಹೇಳಿಕೆಗೆ ಫಡ್ನವೀಸ್ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ತಮ್ಮ ಹಿಂದೂ ವಿರೋಧಿ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಿದರೂ ವಿವಾದ ತಣ್ಣಗಾಗಿಲ್ಲ. ಶಿವಾಜಿ ಮಹಾರಾಜರ ಬಗ್ಗೆ ಜಾರಕಿಹೊಳಿ ಹೇಳಿದ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ನೀವು ಇಂತಹ ಹೇಳಿಕೆಗಳನ್ನು ಒಪ್ಪುತ್ತೀರಾ ಎಂದು ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸಿದ್ದಾರೆ.
ಜಾರಕಿಹೊಳಿ ಅವರು ಶಿವಾಜಿ ಮಹಾರಾಜ್ ಮತ್ತು ಸಂಭಾಜಿ ಮಹಾರಾಜ್ ಅವರ ಬಗ್ಗೆ ಕಾಮೆಂಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿರುವ ಫಡ್ನವಿಸ್, “ಛತ್ರಪತಿ ಶಿವಾಜಿ ಮಹರಾಜರು ಹಾಗೂ ಸಂಭಾಜಿ ಅವರ ಬಗ್ಗೆ ನಿಮ್ಮ ಪಕ್ಷದ ಶಾಸಕರು ಹರಡಿರುವ ಅವಿವೇಕದ, ತಪ್ಪುದಾರಿಗೆಳೆಯುವ, ಅವಮಾನಕರ ಸುಳ್ಳನ್ನು ನೀವು ಒಪ್ಪುತ್ತೀರಾ? ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯೇ? ಮಹಾರಾಷ್ಟ್ರ ಇದನ್ನು ಸಹಿಸುವುದಿಲ್ಲ.
ಶಿವಾಜಿ ಮಹಾರಾಜರ ಕುರಿತು ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಹೇಳಿಕೆ ಅಕ್ಷಮ್ಯವಾದದ್ದು ಎಂದು ಫಡ್ನಾವೀಸ್‌ ಕಿಡಿಕಾರಿದ್ದಾರೆ.
ಜಕರಿಹೊಳಿ ಅವರ ಹೇಳಿಕೆಯನ್ನು ರಾಹುಲ್ ಗಾಂಧಿ ಅವರು ಅನುಮೋದಿಸುತ್ತಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದು ಬಿಜೆಪಿಯ ಅಮಿತ್ ಮಾಳವಿಯಾ ಸಹ ಆಗ್ರಹಿಸಿದ್ದಾರೆ.”ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗಾಗಿ ಮಹಾರಾಷ್ಟ್ರದಲ್ಲಿದ್ದಾರೆ ಮತ್ತು ಅವರ ಕರ್ನಾಟಕದ ಶಾಸಕ ಸತೀಶ್ ಜಾರಕಿಹೊಳಿ ಅವರು ಛತ್ರಪತಿ ಶಿವಾಜಿ ಮಹಾರಾಜ್ ಅವರನ್ನು ಅವಮಾನಿಸುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಹಿರಿಯ ಕಾಂಗ್ರೆಸ್ ನಾಯಕನ ಈ ಮಾತನ್ನು ಒಪ್ಪುತ್ತಾರೆಯೇ? ಅವರು ಸ್ಪಷ್ಟಪಡಿಸದ ಹೊರತು, ಅವರ ಉದ್ದೇಶಗಳು ಅನುಮಾನಾಸ್ಪದವಾಗಿ ಉಳಿಯುತ್ತವೆ,” ಎಂದು ಅಮಿತ್ ಮಾಳವೀಯ ವಾಗ್ದಾಳಿ ನಡೆಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ಬ್ರಿಟಿಷರು ಸಂಭಾಜಿ ಅವರನ್ನು ಕೊಂದ ಬಗ್ಗೆ ಮಾತನಾಡಿದ್ದಾರೆ. “ಆ ಬಳಿಕ ಸಂಭಾಜಿಯವರನ್ನು ಧರ್ಮವೀರ್ ಎಂದು ಕರೆಯಲಾಯಿತು ಎಂಬುದು ಇತಿಹಾಸದ ಮತ್ತೊಂದು ಅಂಶವಾಗಿದೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ ಎಂದು ಮಾಳವೀಯ ಉಲ್ಲೇಖಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!